ಬೆವರಿಳಿಸುವ ಬಿಸಿಲಿನಲ್ಲಿ ಕಬ್ಬಿನ ಹಾಲು ಕುಡಿದರೆ ಏನಾಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

ನೆತ್ತಿ ಸುಡುವ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವುದೆಂದರೆ ನಿಜಕ್ಕೂ ಅದು ಸವಾಲೇ ಸರಿ. ಬಿಸಿಲಿನಿಂದ ಬಳಲಿ ಬೆಂಡಾದವರು ದಾಹ ಇಂಗಿಸಿಕೊಳ್ಳಲು ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಅಥವಾ ಎಳನೀರಿನ ಮೊರೆ ಹೋಗುತ್ತಾರೆ. ಅದು ಬಿಟ್ಟರೆ ಮತ್ತೆ ಹೆಚ್ಚಿನವರು ಇಷ್ಟಪಡುವುದು ಕಬ್ಬಿನಹಾಲು.

ಬೇರೆ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನಹಾಲು ದುಬಾರಿಯೇನಲ್ಲ. ಬದಲಿಗೆ ಕೈಗೆಟುಕುವ ದರದಲ್ಲಿ ಸಿಗುವ ಕಾರಣ ಎಲ್ಲರೂ ಅದನ್ನೇ ಕುಡಿಯಬಯಸುತ್ತಾರೆ. ಕಬ್ಬಿನಹಾಲು ಕೇವಲ ಸಕ್ಕರೆ ಮತ್ತು ಬೆಲ್ಲಕ್ಕೆ ಮಾತ್ರ ಸೀಮಿತವಲ್ಲ.

ಇದರಲ್ಲಿರುವ ಅಂಶಗಳ ಬಗ್ಗೆ ಜನರಿಗೆ ತಿಳಿದಿಲ್ಲ ಅಷ್ಟೇ. ಹಲವಾರು ವಿಟಮಿನ್ ಗಳಿಂದ ಕೂಡಿದ ಕಬ್ಬಿನಹಾಲು ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಅನೇಕ ರೀತಿಯ ಮಿನರಲ್ಸ್ಗಳಿವೆ. ಇವು ಬಾಯಿಯ ಆರೋಗ್ಯವನ್ನು ಕಾಪಾಡಿ, ವಾಸನೆಯುಕ್ತ ಉಸಿರಾಟ, ಹಲ್ಲು ಹಾಳಾಗುವುದನ್ನು ತಡೆಯುತ್ತದೆ.

ಕಬ್ಬಿನಹಾಲು ತ್ವಚೆಯ ಆರೋಗ್ಯಕ್ಕೂ ಉತ್ತಮ. ಕಬ್ಬಿನಹಾಲು ಸೇವಿಸುವುದರಿಂದ ತ್ವಚೆ ಮೃದುವಾಗುತ್ತದೆ. ಹಾಗೆ ಕಾಂತಿಯುತವಾಗಿ ಆರೋಗ್ಯವಾಗಿರುತ್ತದೆ. ತ್ವಚೆ ಸದಾ ಯಂಗ್ ಆಗಿ ಕಾಣುವಂತೆ ಮಾಡಲು ಕಬ್ಬಿನಹಾಲು ಸಹಕಾರಿ. ಸ್ತನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಕೂಡ ಕಬ್ಬಿನಹಾಲಿನ ಜ್ಯೂಸ್ನ್ನು ಸೇವಿಸಿಲು ಸಲಹೆ ನೀಡಲಾಗುತ್ತದೆ.

ಕಬ್ಬಿನ ಹಾಲಿನಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಪೊಟ್ಯಾಶಿಯಮ್ ಹಾಗು ಇತರೆ ಪೌಷ್ಟಿಕಾಂಶಗಳಿರುವುದರಿಂದ ದೇಹಕ್ಕೆ ತ್ವರಿತವಾಗಿ ಎನರ್ಜಿಯನ್ನು ನೀಡುತ್ತದೆ. ಸುಸ್ತು, ಅಶಕ್ತತೆ ಎನಿಸಿದಾಗ ಕಬ್ಬಿನಹಾಲು ಸೇವಿಸಿ, ಆರಾಮ ಸಿಗುತ್ತದೆ.

ಕಬ್ಬಿನಹಾಲಿನಲ್ಲಿ ಪೊಟ್ಯಾಶಿಯಮ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ವಿವಿಧ ರೀತಿಯ ಸೋಂಕುಗಳಿಂದ ಜಿರ್ಣಾಂಗವ್ಯವಸ್ಥೆ ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

Facebook Comments