ಅಕಸ್ಮಿಕ ಬೆಂಕಿಗೆ 2 ಎಕರೆ ಕಾಫಿ ಮತ್ತು ಮೆಣಸು ಸಂಪೂರ್ಣ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಮಾ.13- ಅಕಸ್ಮಿಕ ಬೆಂಕಿಯಿಂದಾಗಿ ಎರಡು ಎಕರೆ ಕಾಫಿ ಮತ್ತು ಮೆಣಸು ಸಂಪೂರ್ಣ ಬೆಂಕಿಗೆ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಭೂವನಹಳ್ಳಿಯಲ್ಲಿ ನೆಡೆದಿದೆ. ತಾಲೂಕಿನ ಕಸಬಾ ಹೋಬಳಿ ಭೂವನಹಳ್ಳಿ ಗ್ರಾಮದ ಶೇಷಮ್ಮ ಮತ್ತು ನಿರ್ವಾಣೇಗೌಡ ಎಂಬುವರಿಗೆ ಸೇರಿದ ತೋಟವೆ ಬೆಂಕಿ ಬಿದ್ದು ಬೆಳೆದಿದ್ದ ಬೆಳೆ ಬೆಂಕಿಗೆ ಸಿಲುಕಿ ಗ್ರಾಮದ ಶೇಷಮ್ಮ ನಿರ್ವಾಣೇಗೌಡ ಎಂಬುವವರಿಗೆ ಸೇರಿದ ತೋಟ ಸಂಪೂರ್ಣ ಸುಟ್ಟು ಹೋಗಿದೆ.

ಕಳೆದ ಹತ್ತು ವರ್ಷಗಳಿಂದ ತೋಟವನು ಉತ್ತಮವಾಗಿ ನಿರ್ವಹಿಸಿದ್ದರು. ಕಾಫಿ ಕೊಯ್ಲು ಮಾಡಿದ್ದು, ಮೆಣಸು ಕಟಾವು ಮಾಡುವ ಹಂತದಲ್ಲಿತ್ತು. ಆದರೆ ಬೆಂಕಿಯಲ್ಲಿ ಮೆಣಸು ಸುಟ್ಟಿರುವುದರಿಂದ ನಷ್ಟವನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಬೆಂಕಿ ನಂದಿಸಲು ತೋಟದ ಸಮೀಪ ತೆರಳಲು ಯಾವುದೆ ವಾಹನಕ್ಕೆ ಸಾಧ್ಯವಾಗದ ಕಾರಣ ಗ್ರಾಮಸ್ಥರೆ ಕೆಲ ಭಾಗ ಮಾತ್ರ ನೀರನ್ನು ಹಾಕಿ ನಂದಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ತಾಲೂಕಿನಲ್ಲಿ ಈಗಾಗಲೆ ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗೆ ಬಿಂಕಿ ಬಿದ್ದಿರುವುದರಿಂದ ಇನ್ನೂ ಸಂಕಷ್ಟ ಅನುಭವಿಸುವಂತಾಗಿದ್ದು, ಅಲ್ಲದೆ ತೋಟಕ್ಕೆ ಬಿದ್ದ ಬೆಂಕಿಯಿಂದ ಬೆಳೆ ಮತ್ತು ಗಿಡಗಳು ಸಂಪೂರ್ಣ ನಾಶವಾಗಿದ್ದು, ರೈತರಿಗೆ ಯಾವ ರೀತಿ ಪರಿಹಾರ ನೀಡಲು ಸಾಧ್ಯ ಎಂಬುದನ್ನು ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಹರೀಶ್, ಗ್ರಾಪಂ ಸದಸ್ಯ ರವಿಚಂದ್ರ ಇದ್ದರು. ತಾಲೂಕಿನ ಭೂವನಹಳ್ಳಿ ಗ್ರಾಮದ ಕಾಫಿ ತೋಟಕ್ಕೆ ಬೆಂಕಿ ಬಿದ್ದಿರುವುದನ್ನು ವಕ್ಷಿಸುತ್ತಿರುವ ಶಾಸಕ ಕೆ.ಎಸ್.ಲಿಂಗೇಶ್.

Facebook Comments