ಉಗ್ರರ ಜೊತೆ ಪಾಕ್‍ ನಂಟಿಗೆ ಇಲ್ಲಿದೆ ಮತ್ತೊಂದು ಮಹತ್ವದ ಸಾಕ್ಷಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಾಕೋಟ್,ಮಾ.13- ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂಬುದಕ್ಕೆ ಮತ್ತೊಂದು ಬಲವಾದ ಸಾಕ್ಷ್ಯಾಧಾರವೊಂದು ಲಭಿಸಿದೆ. ಪಾಕಿಸ್ತಾನ ಸೇನೆಯ ಉನ್ನತಾಧಿಕಾರಿಗಳು ಸೇರಿದಂತೆ ಐಎಸ್‍ಐ ಬೇಹುಗಾರಿಕೆ ಸಂಸ್ಥೆಯ ಸಿಬ್ಬಂದಿ ಬಾಲಾಕೋಟ್ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಹತರಾದ ಉಗ್ರಗಾಮಿಗಳ ಕುಟುಂಬಕ್ಕೆ ಸಾಂತ್ವನ ಹೇಳಿತ್ತಿರುವ ವಿಡಿಯೋವನ್ನು ಪಾಕ್‍ನ ಸಾಮಾಜಿಕ ಕಾರ್ಯಕರ್ತರೊಬ್ಬರು ಬಿಡುಗಡೆ ಮಾಡಿದ್ದಾರೆ.

ಇದು ಪಾಕಿಸ್ತಾನದ ಉಗ್ರರ ಸಖ್ಯವನ್ನು ಮತ್ತೊಮ್ಮೆ ಬಯಲು ಮಾಡಿದೆ.ಅಮೆರಿಕಾದಲ್ಲಿ ನೆಲೆಸಿರುವ ಪಾಕಿಸ್ತಾನದ ಸೋಷಿಯಲ್ ವರ್ಕರ್ ಒಬ್ಬರು ಈ ವಿಡಿಯೋ ಬಿಡುಗಡೆ ಮಾಡಿದ್ದು ಇದರಲ್ಲಿ ಪಾಕಿಸ್ತಾನಿ ಸೇನಾ ಸಮವಸ್ತ್ರ ತೊಟ್ಟ ಉನ್ನತಾಧಿಕಾರಿಗಳು ಭಯೋತ್ಪಾದಕರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಂತೈಸುತ್ತಿರುವ ದೃಶ್ಯವಿದೆ.

ಇದು ಪಾಕ್ ಸೇನೆ ಮತ್ತು ಐಎಸ್‍ಐ ಉಗ್ರರಿಗೆ ಬೆಂಬಲ ನೀಡುತ್ತಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಭಾರತದ ವಿಮಾನಗಳು ನಡೆಸಿದ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರಗಾಮಿಗಳು ಹತರಾಗಿದ್ದಾರೆ ಎನ್ನುವುದನ್ನು ಸಾಮಾಜಿಕ ಕಾರ್ಯಕರ್ತರು ದೃಢಪಡಿಸಿದ್ದಾರೆ.

ಇದು ಭಾರತ ನಡೆಸಿದ ನಿರ್ದಿಷ್ಟ ಏರ್‍ಸ್ಟ್ರೈಕ್‍ಗೆ ಪ್ರಬಲ ಸಾಕ್ಷಿಯಾಗಿದೆ.ಪುಲ್ವಾಮಾ ಉಗ್ರಗಾಮಿಗಳ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಗಳು ಬಾಲಾಕೋಟ್ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಮಿಂಚಿನ ದಾಳಿ ನಡೆಸಿ 250ಕ್ಕೂ ಭಯೋತ್ಪಾದಕರನ್ನು ಹತ್ಯೆ ಮಾಡಿ ಶಿಬಿರಗಳನ್ನು ನಿರ್ನಾಮ ಮಾಡಿತ್ತು.

ಭಾರತದ ಯುದ್ಧವಿಮಾನಗಳು ನಮ್ಮ ಗಡಿರೇಖೆಯನ್ನು ಉಲ್ಲಂಘಿಸಿ ವಾಯುದಾಳಿ ನಡೆಸಿರುವುದು ನಿಜ ಆದರೆ ಯಾವುದೇ ಭಯೋತ್ಪಾಕದರು ಸಾವನ್ನಪ್ಪಿಲ್ಲ ಎಂದು ಈ ಹಿಂದಿನಿಂದಲೂ ಹೇಳಿಕೊಳ್ಳುತ್ತಾ ಬಂದಿದ್ದ ಪಾಕ್‍ಗೆ ಈಗ ಮುಖಭಂಗವಾಗುವಂತೆ ಈಗಾಗಲೇ ಕೆಲವು ವಿಡಿಯೋಗಳು ಬಹಿರಂಗಗೊಂಡಿದೆ.

ಉಗ್ರರ ಶವಗಳನ್ನು ಪಾಕ್ ಸೇನೆ ತರಾತುರಿಯಲ್ಲಿ ಸಾಗಿಸಿದ ಬಗ್ಗೆ ಮತ್ತು ಸುಟ್ಟು ನದಿ ಎಸೆದ ಬಗ್ಗೆ ಈಗಾಗಲೇ ಸಾಕ್ಷಿಗಳು ಲಭಿಸಿದೆ. ಈಗ ಈ ವಿಡಿಯೋ ಪಾಕಿಸ್ತಾನದ ಕುತಂತ್ರ ಬುದ್ಧಿಗೆ ಪುರಾವೆಯಾಗಿದೆ.

Facebook Comments