ನಿರ್ಣಾಯಕ ಪಂದ್ಯದಲ್ಲೂ ಸೋತ ಭಾರತ , 3-2 ಅಂತರದಲ್ಲಿ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ.ಮಾ. 13 : ಇನ್ನಿ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ 35 ರನ್ ಗಳಿಂದ ಭಾರತವನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 272 ರನ್‌ಗಳಿಸಿತು.273 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ನಿಗದಿತ 50 ಓವರ್‌ಗಳಲ್ಲಿ 237 ರನ್‌ಗಳಿಗೆ ಆಲೌಟಾಗುವ ಮೂಲಕ ಸೋಲನ್ನೊಪ್ಪಿತು.

ಆರಂಭಿಕ ಆಟಗಾರ ರೋಹಿತ್ ಶರ್ಮಾ(56, 89 ಎಸೆತ, 4 ಬೌಂಡರಿ) ಅರ್ಧಶತಕ ಗಳಿಸಿ ಏಕಾಂಗಿ ಹೋರಾಟ ನೀಡಿದರು. ಶಿಖರ್ ಧವನ್(12)5ನೇ ಓವರ್‌ನಲ್ಲಿ 12 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು.

ಆಗ ಜೊತೆಯಾದ ನಾಯಕ ವಿರಾಟ್ ಕೊಹ್ಲಿ(20) ಹಾಗೂ ರೋಹಿತ್ 2ನೇ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿದರು. ಈ ಇಬ್ಬರು ಬೇರ್ಪಟ್ಟ ಬಳಿಕ ತಂಡ ಮತ್ತೆ ಹಿನ್ನಡೆ ಅನುಭವಿಸಿತು.

ಭಾರತ 29ನೇ ಓವರ್‌ನಲ್ಲಿ 132 ರನ್‌ಗೆ ಆರು ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆಲ್‌ರೌಂಡರ್ ಕೇದಾರ್ ಜಾಧವ್(44) ಹಾಗೂ ಭುವನೇಶ್ವರ ಕುಮಾರ್(46) 7ನೇ ವಿಕೆಟ್‌ಗೆ 91 ರನ್ ಜೊತೆಯಾಟ ನಡೆಸಿ ಒಂದಷ್ಟು ಪ್ರತಿರೋಧ ಒಡ್ಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲರಾದರು.

ಆಸೀಸ್‌ ಬೌಲಿಂಗ್‌ನಲ್ಲಿ ಝಂಪಾ 3 ವಿಕೆಟ್‌, ಕ್ಯುಮಿನ್ಸ್‌ , ರಿಚರ್ಡ್‌ಸನ್‌ ಮತ್ತು ಸ್ಟೊಯ್‌ನಿಸ್‌ ತಲಾ 2 ವಿಕೆಟ್‌ ಪಡೆದರು. ನಥನ್‌ ಲಯನ್‌ 1 ವಿಕೆಟ್‌ ಪಡೆದರು.

ಭಾರತದ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ 3 , ಮೊಹಮದ್‌ ಶಮಿ 2, ಕುಮದೀಪ್‌ ಯಾದವ್‌ 1 ರವೀಂದ್ರ ಜಡೇಜಾ 2 ವಿಕೆಟ್‌ ಪಡೆದರು.

  ಸಂಕ್ಷಿಪ್ತ  ಸ್ಕೋರ್ : 

ಆಸ್ಟ್ರೇಲಿಯಾ : 272/9
ಭಾರತ : 237 (50 ov, target 273

Facebook Comments

Sri Raghav

Admin