‘ಅನುಮಾನವೇ ಬೇಡ, ಮಂಡ್ಯದಿಂದ ನಾನು ಸ್ಪರ್ಧಿಸೋದು ಖಚಿತ’

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮಾ.13- ಸುಮಲತಾ ಸ್ಪರ್ಧೆಯ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ಆದರೆ, ಗೊಂದಲಕ್ಕೆ ಕಾರಣವಾಗಿರುವುದು ಅವರು ಪಕ್ಷೇತರ ಅಭ್ಯರ್ಥಿನಾ ಅಥವಾ ಕಾಂಗ್ರೆಸ್ ಅಭ್ಯರ್ಥಿನಾ ಎಂಬುದು. ಇದಕ್ಕೆ ಇನ್ನೂ ಉತ್ತರ ಸಿಗಬೇಕಾಗಿದೆ. ಆದರೆ, ಸ್ಪರ್ಧೆ ಮಾತ್ರ ಖಚಿತ ಎಂಬುದನ್ನು ಸುಮಲತಾ ಅವರೇ ಒಪ್ಪಿಕೊಂಡಿದ್ದಾರೆ. ಹೌದು, ನನ್ನ ಸ್ಪರ್ಧೆ ಖಚಿತ.

ನನ್ನ ಸ್ಪರ್ಧೆ ಬಗ್ಗೆ ಸಾಕಷ್ಟು ಊಹಾಪೋಹ ಎದ್ದಿವೆ. ನನಗೆ ಸಾಕಷ್ಟು ಪೋನ್‍ಕಾಲ್ ಬರುತ್ತಿವೆ. ನನಗೆ ಶಕ್ತಿಯಾಗಿ ಜನತೆ ನಿಂತಿದ್ದಾರೆ. ಅವರಿಗೆ ನಾನು ಭರವಸೆ ಕೊಡ ಬೇಕಾಗಿದೆ. ಹಾಗಾಗಿ ನಾನು ಸ್ಪರ್ಧೆಯಲ್ಲಿ ಇರೋದು ಖಚಿತ ಅಂತ ಸುಮಲತಾ ಹೇಳಿದರು.

ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇನ್ನೂ ಐದು ದಿನ ಇದೆ. ಅಲ್ಲಿಯವರೆಗೂ ಕಾಯಬೇಕು. ಅಷ್ಟರೊಳಗೆ ಯಾರ ಯಾರ ನಿರ್ಧಾರ ಹೇಗೆ ಎಂಬುದು ಗೊತ್ತಾಗುತ್ತದೆ ಅನ್ನೋ ಮೂಲಕ ಪಕ್ಷೇತರ ಅಭ್ಯರ್ಥಿನಾ ಅಥವಾ ಕಾಂಗ್ರೆಸ್ ಅಭ್ಯರ್ಥಿನಾ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.

ಈಗ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಒಳ್ಳೆಯ ಜನ ಬೆಂಬಲವಿದೆ. ಸ್ಪರ್ಧೆ ಖಚಿತವಾಗಿ ಮಾಡುತ್ತೇನೆ. ಜನರು ಶಕ್ತಿಯಾಗಿ ನಿಂತಿದ್ದಾರೆ ಎಂದರು.

ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಡಾಕ್ಟರ್ ಭೇಟಿ: ಸ್ವಾಭಿಮಾನಕ್ಕಾಗಿ ಸತ್ಯಾಗ್ರಹ ಹೆಸರಿನಲ್ಲಿ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವು ವೈದ್ಯ, ಕಾಂಗ್ರೆಸ್ ಮುಖಂಡ ಡಾ. ರವೀಂದ್ರರನ್ನು ನಟಿ ಸುಮಲತಾ ಅಂಬರೀಶ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಮೂರು ದಿನಗಳಿಂದ ಉಪವಾಸ ಮಾಡುತ್ತಿರುವ ಡಾ. ರವೀಂದ್ರ, ಜಿಲ್ಲಾಯವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹೀಗಾಗಿ ಇಂದೂ ಸಹ ಉಪವಾಸ ಕುಳಿತಿದ್ದಾರೆ. ಸಂಜೆಗೆ ಉಪವಾಸ ಅಂತ್ಯಗೊಳಿಸಲಿದ್ದು, ಇಂದಿಗೆ ಮೂರನೆ ದಿನದ ಉಪವಾಸವಾಗಿದೆ. ಹೋರಾಟಕ್ಕೆ ಹಲವು ನಾಯಕರು, ಹೋರಾಟಗಾರರು, ಅಂಬಿ ಬೆಂಬಲಿಗರು, ಅಭಿಮಾನಿಗಳು ಸಾಥ್ ನೀಡಿದ್ದರು. ಇವರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡಿದ್ದರು.

Facebook Comments