`ಗಿರ್‍ಗಿಟ್ಲೆ’ ಆಟ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಈಗಾಗಲೇ ತನ್ನ ಹಾಡುಗಳು ಹಾಗೂ ಟ್ರೈಲರ್ ಮೂಲಕ ಬಹಳಷ್ಟು ಗಮನ ಸೆಳೆದಿರುವ ಗಿರ್‍ಗಿಟ್ಲೆ ಚಿತ್ರ ಇದೇ ವಾರ ಅದ್ಧೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾವಾಗಿದ್ದು, ರವಿಕಿರಣ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಗಿರೀಶ, ತಿಮ್ಮರಾಜು, ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

ಉದರ ನಿಮತ್ತಂ ಬಹುಕೃತ ವೇಷಂವೆಂಬಂತೆ ಭೂಮಿ ಮೇಲಿರುವ ಪ್ರತಿಯೊಂದು ಜೀವರಾಶಿಯು ಹೊಟ್ಟೆಯನ್ನು ತುಂಬಿಸಿಕೊಳ್ಳಲು ನಾನಾ ವೇಷಗಳನ್ನು ಹಾಕುತ್ತದೆ, ಇದನ್ನೇ ಗಿರ್‍ಗಿಟ್ಲೆ ಕಥಾವಸ್ತುವಾಗಿಸಿ ಕೊಂಡಿದ್ದಾರೆ.

ನಿರ್ದೇಶಕ ರವಿಕಿರಣ ಮಾತನಾಡಿ, ನನಗೆ ಮೊದಲಿನಿಂದಲೂ ಒಂದು ಮಾಸ್ ಕಮರ್ಷಿಯಲ್ ಸಿನಿಮಾ ಮಾಡಬೇಕೆಂಬ ಕನಸಿತ್ತು, ಆಗ ಆ ಕನಸು ಮಾರ್ಚ್ 15 ರಂದು ನನಸಾಗುತ್ತಿದೆ, ಅಂದರೆ ನಮ್ಮ ಗಿರ್‍ಗಿಟ್ಲೆ ಚಿತ್ರವು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಂಗಾಯರಘು ಅವರು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾಕ್ಕೆ ತಿರುವು ಕೊಡಲಿದೆ.

ಒಂದು ರೀತಿಯಲ್ಲಿ ಅವರೇ ಈ ಚಿತ್ರದ ಹೀರೋ ಎನ್ನಬಹುದು. ಕಿರುತೆರೆಯ ನಟಿ ವೈಷ್ಣವಿಗೂ ವಿಶಿಷ್ಟ ಪಾತ್ರವಿದೆ ಎಂದರು. ಮಾಸ್ತಿಗುಡಿ ಚಿತ್ರದ ವೇಳೆ ದುರಂತ ಸಾವು ಕಂಡ ಉದಯ್ ನಟಿಸಿದ ಕೊನೆಯ ಚಿತ್ರವಾದ ಗಿರ್‍ಗಿಟ್ಲೆಯಲ್ಲಿ ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಾದ್, ಗುರು, ಚಂದ್ರು, ವೈಷ್ಣವಿ, ಅದ್ಯಿತಿ ಶಬ್ದ ಉಳಿದ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರವಿಕಿರಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ರವಿಕಿರಣ್ ಸಾಹಿತ್ಯ ಒದಗಿಸಿದ್ದು, ಲಿಯೋ ಪೀಟರ್ಸ್ ಸಂಗೀತ ಸಂಯೋಜಿಸಿದ್ದರೆ, ಸತೀಶ್‍ಬಾಬು ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

movi

Facebook Comments