ತಾಯಿ ಸುಮಲತಾ ಪರ ಪುತ್ರ ಅಭಿಷೇಕ್ ಭರ್ಜರಿ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮಾ.14- ಜಿಲ್ಲೆಯಲ್ಲಿ ರಾಜಕೀಯ ಅಖಾಡ ರಂಗೇರಿದೆ. ತಾಲೂಕಿನಲ್ಲಿ ಅಮ್ಮ- ಮಗನ ಜುಗಲ್ ಬಂದಿ ಜೋರಾಗಿತ್ತು. ತಾಯಿ ಸುಮಲತಾ ಪರ ಪುತ್ರ ಅಭಿಷೇಕ್ ಅಖಾಡಕ್ಕೆ ಧುಮುಕಿ ಪ್ರಚಾರವನ್ನು ಆರಂಭಿಸಿದ್ದಾರೆ.

ಮಳವಳ್ಳಿ ತಾಲೂಕಿನಲ್ಲಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಅಂಬಿ ಪುತ್ರ ಅಭಿಷೇಕ್ ತಮ್ಮ ತಂದೆಯ ಧ್ವನಿ ಅನುಕರಣೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಅಂಬಿಯನ್ನು ಬೆಂಬಲಿಸಿ ಅಂತ ಮನವಿ ಮಾಡುತ್ತಿದ್ದಾರೆ.

ಬಹಿರಂಗ ಬೆಂಬಲ: ತಾಲ್ಲೂಕಿನ ಹಲಗೂರು,ಹಾಡ್ಲಿ,ಬೆಳಕವಾಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರವಾಸ ಮಾಡಿ ಮಾತನಾಡಿದರು. ಸುಮಲತಾ ಹಾಗೂ ಅಭಿಷೇಕ್ ಹೋದ ಕಡೆಯೆಲ್ಲಾ ಅಭಿಮಾನಿಗಳು ಸೇರುವ ಮೂಲಕ ಅವರ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ.  ಕಾಂಗ್ರೆಸ್ ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡಿ, ನಿಮಗೆ ನಮ್ಮ ಬೆಂಬಲವಿದೆ ಎಂದು ಬಹಿರಂಗವಾಹಿ ಹೇಳುತ್ತಿದ್ದಾರೆ.

ಒಳ್ಳೆಯ ರಾಜಕೀಯ: ದ್ವೇಷ, ಮೋಸ ಮತ್ತು ಜಾತಿ ರಾಜಕಾರಣದಿಂದ ಜನಗಳಿಗೂ ಬೇಸರವಾಗಿದೆ. ಅದನ್ನು ಮೀರಿ ಒಳ್ಳೆಯ ರಾಜಕಾರಣ ಮಾಡಬಹುದು ಅನ್ನೋದನ್ನ ನಾವು ತೋರಿಸಬೇಕಿದೆ. ಒಳ್ಳೆಯತನದಿಂದ ರಾಜಕೀಯ ಸಾಬೀತುಪಡಿಸಬೇಕಾಗಿದೆ. ಹೀಗಾಗಿ ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದೀನಿ ಅನ್ನೋ ಮೂಲಕ ಸಿಎಂ ಕುಮಾರಸ್ವಾಮಿಗೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಎಲ್ಲೆಡೆ ಜನಸ್ಪಂದನೆ ಅದ್ಭುತವಾಗಿದ್ದು, ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅದನ್ನ ಮರಿಯೋಕೆ ಆಗಲ್ಲ ಎಂದು ಮನದುಂಬಿ ನುಡಿದರು. ಅಭಿ ಇವತ್ತಿನಿಂದ ಪ್ರಚಾರಕ್ಕೆ ಇಳಿದಿದ್ದಾರೆ. ನಮ್ಮ ಮಾವನ ಹೆಸ್ರೇ ಮಳವಳ್ಳಿ ಹುಚ್ಚೇಗೌಡ. ಅಂಬಿ ಚಿಕ್ಕ ವಯಸ್ಸಿನಲ್ಲಿ ಇಲ್ಲಿ ಹಲವಾರು ವರ್ಷ ಕಾಲ ಕಳೆದಿದ್ದರು. ಇಲ್ಲಿನ ಜನರಿಗೆ ಅಂಬಿ ಎಂದರೆ ವಿಶೇಷ ಪ್ರೀತಿ ಎಂದು ಹೇಳಿದರು.

ತುಮಕೂರು ಜೆಡಿಎಸ್‍ಗೆ ಬಿಟ್ಟರೆ, ಮಂಡ್ಯವನ್ನ ಕಾಂಗ್ರೆಸ್‍ಗೆ ಬಿಟ್ಟು ಕೊಡಬೇಕು ಎನ್ನುವ ವಿಚಾರದ ಬಗ್ಗೆ ನನಗೆ ಯಾರಿಂದಲೂ ಮಾಹಿತಿ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ನನ್ನ ಸ್ಪರ್ಧೆ ವಿಚಾರವನ್ನು ಮಾ.18 ರಂದು ಹೇಳ್ತೀನಿ. ಪ್ರಚಾರಕ್ಕೆ ಸ್ಯಾಂಡಲïವುಡï ನಟರು ಯಾರು ಬರ್ತಾರೆ ಅನ್ನೋದು ಅವತ್ತೇ ಗೊತ್ತಾಗುತ್ತದೆ ಎಂದರು.

ನನಗೆ ಪ್ರಚಾರ ಹೊಸದಲ್ಲ. ಅಪ್ಪನ ಜೊತೆ ಕೂಡ ಬರುತ್ತಿದ್ದೆ. ಈ ಊರಿನಲ್ಲಿ ಅಪ್ಪನ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ನಮ್ಮ ತಾತ ಕೂಡ ಮಳವಳ್ಳಿಯವರು. ಅವರ ಆಶೀರ್ವಾದ ಕೂಡ ಇದೆ.  ನಾವು ಏನೇ ಆದರೂ ಜನರ ಮುಂದೆಯೇ ಆ ತೀರ್ಮಾನ ಮಾಡುತ್ತೇನೆ ನಮಗೆ ರಾಜಕೀಯ ಗೊತ್ತಿಲ್ಲ. ನಮ್ಮ ತಂದೆ ಮತ್ತು ತಾಯಿಗೋಸ್ಕರ ಇಲ್ಲಿಗೆ ಬಂದಿದ್ದೀನಿ ಅಭಿಷೇಕ್ ತಿಳಿಸಿದರು.

ಮಳವಳ್ಳಿ ತಾಲೂಕಿನ ಬಿಜಿಪುರದ ಧರೆಗೆ ದೊಡ್ಡವರು ಮಂಟೇಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುಮಲತಾ ಮತ್ತು ಅಭಿಷೇಕ್, ಸ್ವಾಮೀಜಿ ಸಂಜಯï ರಾಜೇ ಅರಸು ಜೊತೆ ಮಾತುಕತೆ ನಡೆಸಿದರು.  ತಾ,ಪಂ ಅಧ್ಯಕ್ಷ ನಾಗೇಶ್,ಶರತ್,ಕಾಂಗ್ರೇಸ್ ಪಕ್ಷದ ತಾ,ಅಧ್ಯಕ್ಷ ಪುಟ್ಟರಾಮು, ದೇವರಾಜು,ವಿಶ್ವಾಸ್,ವಡರಹಳ್ಳಿ,ಮಹದೇವು,ಮುಂತಾದವರು ಇದ್ದರು.

Facebook Comments

Sri Raghav

Admin