ಭಾರತಕ್ಕೆ ಚೀನಾ ಅಡ್ಡಗಾಲು : ಪರ್ಯಾಯ ಕ್ರಮದ ಬಗ್ಗೆ ರಾಜತಾಂತ್ರಿಕರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮಾ.14(ಪಿಟಿಐ)- ಕುಖ್ಯಾತ ಉಗ್ರಗಾಮಿ ಹಾಗೂ ಜೆಇಎಂ ಮುಖ್ಯಸ್ಥ ಮಸೂದ್ ಅಜರ್‍ನನ್ನು ಜಾಗತಿಕ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿರುವುದಕ್ಕೆ ಸಂಯುಕ್ತ ರಾಷ್ಟ್ರಗಳ ರಾಜತಾಂತ್ರಿಕರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಚೀನಾ ಇದೇ ರೀತಿ ಅಡ್ಡಿಪಡಿಸುವುದನ್ನು ಮುಂದುವರಿಸಿದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಜವಾಬ್ದಾರಿಯು ಸದಸ್ಯ ದೇಶಗಳು ಇತರ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಚಿಸದ ರಾಜತಾಂತ್ರಿಕರು ಎಚ್ಚರಿಕೆ ನೀಡಿದ್ಧಾರೆ.

ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿ, ಅತನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಬೇಕೆಂದು ಭಾರತ, ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಂಡಿಸಿದ್ದ ಪ್ರಸ್ತಾವನೆ ಮತ್ತು ಆ ಕುರಿತ ನಿರ್ಣಯಕ್ಕೆ ಚೀನಾ ನಾಲ್ಕನೇ ಬಾರಿಯೂ ವಿರೋಧ ವ್ಯಕ್ತಪಡಿಸಿದೆ.

ಇದರಿಂದ ಭಾರತದ ಮಿತ್ರ ರಾಷ್ಟ್ರಗಳು ತೀವ್ರ ಅಸಮಾಧಾನಗೊಂಡಿವೆ. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಪ್ರಮುಖ ಘಟಕವೊಂದರ ರಾಜತಾಂತ್ರಿಕರು ಪರ್ಯಾಯ ಕ್ರಮದ ಬಗ್ಗೆ ಸಲಹೆ ಮಾಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

Facebook Comments