ವೆಬ್‍ಸೈಟ್‍ಗಳಲ್ಲಿ ಜಾಹೀರಾತು ನೀಡಿ ವಂಚಿಸುತ್ತಿದ್ದ ಆಸಾಮಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.14- ವೆಬ್‍ಸೈಟ್‍ಗಳಲ್ಲಿ ಫ್ಲಾಟ್‍ಗಳನ್ನು ಬಾಡಿಗೆ ಹಾಗೂ ಲೀಜ್‍ಗೆ ಕೊಡುವುದಾಗಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಹಮ್ಮದ್ ಅಬ್ದುಲ್ ರಹೀಂ ಅಲಿಯಾಸ್ ಯಾಸಿರ್ (47) ಬಂಧಿತ ವಂಚಕ.

ಮಾರತ್ತಹಳ್ಳಿ ವ್ಯಾಪ್ತಿಯಲ್ಲಿನ ಫ್ಲಾಟ್‍ಗಳನ್ನು ಬಾಡಿಗೆ ಹಾಗೂ ಲೀಜ್‍ಗೆ ಕೊಡುವುದಾಗಿ ವೆಬ್‍ಸೈಟ್‍ಗಳಲ್ಲಿ ಜಾಹೀರಾತು ನೀಡಿ ಆ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಫ್ಲಾಟ್‍ಗಳಿಗೆ ತಾನೇ ಮಾಲೀಕನೆಂದು ಸುಳ್ಳು ಹೇಳಿ ನಕಲಿ ಅಗ್ರಿಮೆಂಟ್ ಮಾಡಿಕೊಟ್ಟು ಲಕ್ಷಾಂತರ ಹಣ ಪಡೆದು ವಂಚಿಸಿದ್ದನು.

ಈತನ ಬಂಧನದಿಂದ ಇದುವರೆಗೂ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ವಂಚಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಹೆಸರನ್ನು ಬದಲಾಯಿಸಿಕೊಂಡು ಸುಳ್ಳು ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.  ಈತನಿಂದ ವಂಚನೆಗೊಳಗಾದವರು ಯಾರಾದರೂ ಇದ್ದಲ್ಲಿ ಮಾರತ್ತಹಳ್ಳಿ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ.

Facebook Comments