ಭಾರತದಲ್ಲಿ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣ ಒಪ್ಪಂದಕ್ಕೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮಾ.14- ವಾಣಿಜ್ಯಾತ್ಮಕವಾಗಿ ಭಾರತದೊಂದಿಗೆ ಅಸಹಾಕಾರ ಹೊಂದಿರುವ ಟ್ರಂಪ್ ಆಡಳಿತ ಇದೀಗ ಮಹತ್ವದ ನಡೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಪರಮಾಣು ಇಂಧನ ಮಾರಾಟಕ್ಕೆ ಹಾಕಿದ್ದು, ಪರಿಣಾಮ ಭಾರತದಲ್ಲಿ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಒಪ್ಪಂದಳಿಗೆ ಸಹಿ ಹಾಕಿದೆ.

ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ಒಪ್ಪಂದ ಅಡಿಯಲ್ಲಿ ಭಾರತ ಮತ್ತು ಅಮೆರಿಕ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣಕ್ಕೆ ಸಹಿ ಹಾಕಿದ್ದು, ನಿನ್ನೆ ಈ ಬಗ್ಗೆ ಉಭಯ ದೇಶಗಳು ಜಂಟಿ ಹೇಳಿಕೆ ನೀಡಿವೆ.

ವಾಷಿಂಗ್ಟನ್‍ನಲ್ಲಿ ನಡೆದ ಭಾರತೀಯ ಪ್ರತಿನಿಧಿಗಳೊಂದಿಗಿನ ಸಭೆ ಬಳಿಕ ಅಮೆರಿಕ ಸರ್ಕಾರ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಪರಮಾಣು ಇಂಧನ ಮಾರಾಟಕ್ಕೆ ಸಹಿ ಹಾಕಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹಾಗೂ ಅಮೆರಿಕದ ಆ್ಯಂಡ್ರಿಯಾ ಥಾಂಪ್ಸನ್ ಅವರು ಪರಸ್ಪರ ಒಪ್ಪಂದಳಿಗೆ ಸಹಿ ಹಾಕಿದ್ದಾರೆ.

ಅಮರಿಕದ ಪಿಟ್ಸ್ ಬರ್ಗ್ ಮೂಲದ ವೆಸ್ಟಿಂಗ್ ಹೌಸ್ ಸಂಸ್ಥೆ ಭಾರತದಲ್ಲಿ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಭಾರತದೊಂದಿಗೆ ಚರ್ಚೆ ನಡೆಸುತ್ತಿದೆ. ಇನ್ನು ತನ್ನ ಪರಮಾಣು ಇಂಧನ ಸಾಮಥ್ರ್ಯವನ್ನು 2024ರ ವೇಳೆಗೆ ತ್ರಿಗುಣಗೊಳಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಆಸ್ಟ್ರೇಲಿಯಾ ಮತ್ತು ಅಮೆರಿಕದೊಂದಿಗೆ ನಿರಂತರ ಚರ್ಚೆ ನಡೆಸುತ್ತಿದೆ.

Facebook Comments

Sri Raghav

Admin