ಬೆಂಗಳೂರಿನ ಈ ಭಾಗದಲ್ಲಿ ಇಂದು ವಾಹನ ಸವಾರರಿಗೆ ಕಿರಿಕಿರಿ ಗ್ಯಾರಂಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.14- ಆರ್.ವಿ.ರಸ್ತೆ ಲಾಲ್‍ಬಾಗ್ ವೆಸ್ಟ್  ಗೇಟ್‍ನಿಂದ ಮಾರೇನಹಳ್ಳಿ ಜಂಕ್ಷನ್ ಮಾರ್ಗವಾಗಿ ಬನಶಂಕರಿ ಟಿಟಿಎಂಸಿವರೆಗೆ ಸೇರುವ ಮೆಟ್ರೋ ರೀಚ್ ಕಾರಿಡಾರ್‍ನ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಇಂದಿನಿಂದ  ಆರಂಭವಾಗುತ್ತಿದ್ದು, ಕಾಮಗಾರಿ ಮುಗಿಯುವವರೆಗೂ ವಾಹನ ಸವಾರರು ಹಾಗೂ ಪ್ರಯಾಣಿಕರು ವನವಾಸ ಪಡುವುದು ಗ್ಯಾರಂಟಿ.

ಬಿಬಿಎಂಪಿ ವತಿಯಿಂದ ಇಂದಿನಿಂದ ದ ವೈಟ್‍ಟಾಪಿಂಗ್ ಕಾಮಗಾರಿ ಪ್ರಾರಂಭವಾಗುತ್ತಿದ್ದು, ಈ ಕಾಮಗಾರಿ ವೇಳೆ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಆಗುವ ಅನಾನುಕೂಲ ತಪ್ಪಿಸಲು ಹಾಗೂ ವೈಟ್‍ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸದರಿ ರಸ್ತೆಯ ಸಮಾನಾಂತರ ರಸ್ತೆಗಳಲ್ಲಿ ಸಂಚರಿಸಬೇಕಿರುತ್ತದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಬಿಬಿಎಂಪಿ ಮನವಿ ಮಾಡಿದೆ.

ಪೀಕ್ ಅವರ್ಸ್‍ನಲ್ಲಿ ಈ ರಸ್ತೆ ಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಇನ್ನು ಕಾಮಗಾರಿ ಆರಂಭವಾದರೆ ಕಚೇರಿಗಳಿಗೆ ತೆರಳಲು ಒಂದು ಗಂಟೆ ಮುಂಚಿತವಾಗಿಯೇ ಮನೆ ಬಿಡಬೇಕು.  ತಡವಾಗುವುದು ಗ್ಯಾರಂಟಿ. ಹಾಗಾಗಿ ಪ್ರಯಾಣಿಕರು ಎಚ್ಚರ ವಹಿಸಿದರೆ ಒಳ್ಳೆಯದು.

ಕಾಮಗಾರಿ ಪೂರ್ಣಗೊಳ್ಳು ವವರೆಗೂ ಸಂಚಾರ ದಟ್ಟಣೆ ಆಗದಂತೆ ಸಂಚಾರ ಪೊಲೀಸರು ಹಲವು ಕ್ರಮಗಳನ್ನು ಸಹ ಕೈಗೊಂಡಿದ್ದಾರೆ. ಕಾಮಗಾರಿ ನಡೆಯುವ ವೇಳೆ ವಾಹನಗಳು ರಸ್ತೆ ಬದಿ ಕೆಟ್ಟು ನಿಂತರೆ ಶೀಘ್ರ ತೆರವುಗೊಳಿಸಲು ಟೋಯಿಂಗ್ ವಾಹನವನ್ನು ಇಟ್ಟುಕೊಂಡಿರಬೇಕು.

ಪರ್ಯಾಯ ರಸ್ತೆಗಳು ಮತ್ತು ಸೇವಾ ರಸ್ತೆಗಳಿಗೆ ಅಗತ್ಯವಿದ್ದಲ್ಲಿ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು, ಯಾವುದೇ ಸಮಸ್ಯೆಯಿಂದ ಸಂಚಾರ ಸ್ಥಗಿತ ಗೊಂಡಲ್ಲಿ ಕೂಡಲೇ ಸ್ಥಳೀಯ ಸಂಚಾರಿ ಪೊಲೀಸರಿಗೆ ವಿಷಯ ತಿಳಿಸುವುದು.  ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಂಪು ದೀಪ ಅಳವಡಿಸುವುದು, ಕಾಮಗಾರಿ ನಿಗದಿತ ಅವಧಿಯೊಳಗೆ ಮುಕ್ತಾಯ ಮಾಡುವುದು. ರಸ್ತೆ ಅಗೆಯುವಾಗ ಬಂದಂತ ಮಣ್ಣನ್ನು ರಸ್ತೆಯಲ್ಲೇ ಹಾಕಿ ವಾಹನ ಸಂಚಾರಕ್ಕೆ ಅಡಚಣೆಯಾಗುವಂತೆ ಅತಿಕ್ರಮಣ ಮಾಡುವಂತಿಲ್ಲ.

ಒಂದು ಭಾಗದ ಕಾಮಗಾರಿ ಪೂರ್ಣಗೊಂಡ ನಂತರ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಂತರವೇ ಮುಂದಿನ ಭಾಗದ ಕಾಮಗಾರಿ ಪ್ರಾರಂಭಿಸಬೇಕು. ಬ್ಯಾರಿಕೇಡ್‍ಗಳನ್ನು ಹಾಕಬೇಕು.  ಕಾಮಗಾರಿಗೆ ಸಂಬಂಧಿಸಿದ ವಸ್ತುಗಳು ಮತ್ತು ಕಚ್ಚಾ ವಸ್ತುಗಳು ಹಾಗೂ ವಾಹನಗಳನ್ನು ರಸ್ತೆಯಲ್ಲೇ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟು ಮಾಡಬಾರದು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ ಕಾಮಗಾರಿ ಮುಗಿಯು ವವರೆಗೂ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವುದು ನಿಶ್ಚಿತ.

Facebook Comments