ಬಿಜೆಪಿ ಸೇರಿದ ಸೋನಿಯಾ ಗಾಂಧಿ ಆಪ್ತ, ಕಾಂಗ್ರೆಸ್‍ಗೆ ಆಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮಾ.14- ಯುಪಿಎ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಎಂದೇ ಹೇಳಲಾಗುತ್ತಿದ್ದ ಟಾಮ್ ವದಕನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.  ಈ ಬೆಳವಣಿಗೆ ಕಾಂಗ್ರೆಸ್‍ನಲ್ಲಿ ಆಶ್ಚರ್ಯದೊಂದಿಗೆ ಆಘಾತವನ್ನು ಉಂಟು ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಪಾಕಿಸ್ತಾನ ಉಗ್ರರ ನಮ್ಮ ನೆಲದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೇಜಬ್ದಾರಿ ಕ್ರಮದಿಂದ ನೋವುಂಟಾಗಿತ್ತು.

ಒಂದು ರಾಜಕೀಯ ಪಕ್ಷವಾಗಿ ದೇಶದ ಭದ್ರತಾ ವಿಷಯದಲ್ಲಿ ಅಸಡ್ಡೆ ತೋರುವುದು ಸರಿಯಲ್ಲ ರೀತಿ ಮನಸ್ಸಿಗೆ ತೀವ್ರ ನೋವುಂಟು ಮಾಡಿತ್ತು ಎಂದು ಟಾಮ್ ಹೇಳಿದರು.ಪಕ್ಷದ ಈ ನಡೆಯಿಂದಾಗಿ ಅಸಮಾಧಾನವಿತ್ತು.

ಇದು ದೇಶದ ವಿರುದ್ಧದ ನಡೆ ಎಂದುಕೊಂಡೆ. ಹಾಗಾಗಿ ನಾನು ಕಾಂಗ್ರೆಸ್ ಪಕ್ಷ ತೊರೆಯುವ ನಿರ್ಧಾರ ಮಾಡಿದೆ ಎಂದು ಅವರು ತಿಳಿಸಿದರು. ಅದರಂತೆ ಇಂದು ದೇಶಕ್ಕಾಗಿ ದುಡಿಯುವ ಪಕ್ಷವನ್ನು ಬೆಂಬಲಿಸುವುದಲ್ಲದೆ, ಆ ಪಕ್ಷದಲ್ಲಿ ದುಡಿಯಲು ಇಚ್ಛಿಸುತ್ತೇನೆ . ಈ ಕಾರಣದಿಂದ ನಾನು ಬಿಜೆಪಿ ಸೇರಿದ್ದೇನೆ ಎಂದು ಟಾಮ್ ಸ್ಪಷ್ಟಪಡಿಸಿದರು.

Facebook Comments