ಭಾರತದ ಪ್ರಥಮ ಮಹಿಳಾ ಪೈಲಟ್ ಸರಳಾ ಟಕ್ರಾಲ್ ಪುಣ್ಯ ಸ್ಮರಣೆ ಇಂದು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.15- ಭಾರತದ ಪ್ರಪ್ರಥಮ ಮಹಿಳಾ ಪೈಲೆಟ್ ಎಂದೇ ವಿಶ್ವವಿಖ್ಯಾತಿ ಪಡೆದ ಸರಳಾ ಟಕ್ರಾಲ್ ಅವರ 11ನೇ ಪುಣ್ಯಸ್ಮರಣೆ ಇಂದು.

ಭಾರತದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರುವುದಕ್ಕೆ ಸಾಂಪ್ರದಾಯಿಕ ಕಟ್ಟುಪಾಡುಗಳು ಮತ್ತು ತಾರತಮ್ಯ ಹೆಚ್ಚಾಗಿದ್ದ ಕಾಲದಲ್ಲೇ (1930ರಲ್ಲಿ ) ಸರಳಾ ಅವರು ಲಘು ವಿಮಾನವನ್ನು ಹಾರಾಟ ಮಾಡುವ ಮೂಲಕ ಭಾರತದ ಪ್ರಥಮ ಮಹಿಳಾ ಪೈಲೆಟ್ ಎಂಬ ಕೀರ್ತಿಗೆ ಪಾತ್ರರಾದರು.

1914ರಲ್ಲಿ ಜನಿಸಿದ ಸರಳಾ, ತಮ್ಮ 21ನೇ ವಯಸ್ಸಿನಲ್ಲಿ ಲೈಟ್ ಏರ್‍ಕ್ರಾಫ್ಟ್ ವಿಮಾನ ಚಾಲನೆ ಮಾಡುವ ಮೂಲಕ ಭಾರತದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು.

ಹನ್ನೊಂದು ವರ್ಷಗಳ ಹಿಂದೆ ಮಾರ್ಚ್ 15, 2008ರಲ್ಲಿ ಸರಳಾ ನಿಧನರಾದರು. ಅವರ ಸಾಹಸ, ಸಾಧನೆ ಸದಾ ನೆನಪಿನಲ್ಲಿ ಉಳಿಯುವಂತಾಗಿದೆ.

Facebook Comments

Sri Raghav

Admin