ಇಂದಿನ ಪಂಚಾಗ ಮತ್ತು ರಾಶಿಫಲ (15-03-2019- ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗುಂಪಿನ ಮುಂದಾಳುವಾಗಿ ಹೋಗಬಾರದು. ಕಾರ್ಯ ಕೈಗೂಡಿದರೆ ಸಮಾನವಾದ ಪ್ರಯೋಜನ ಆಗುವುದು. ಒಂದು ವೇಳೆ ಕೆಲಸ ಕೆಟ್ಟುಹೋದರೆ ಆಗ ಆ ಮುಂದಾಳನ್ನು ಕೊಲ್ಲುತ್ತಾರೆ.  -ಹಿತೋಪದೇಶ

# ಪಂಚಾಂಗ :ಶುಕ್ರವಾರ , 15.03.2019
ಸೂರ್ಯ ಉದಯ ಬೆ.06.27 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಮ.12.53 / ಚಂದ್ರ ಅಸ್ತ ಮ.2.05
ವಿಲಂಬಿ ಸಂವತ್ಸರ / ಉತ್ತರಾಯಣ/ ಶಿಶಿರ ಋತು /ಫಾಲ್ಗುಣ ಮಾಸ / ಶುಕ್ಲಪಕ್ಷ / ತಿಥಿ : ನವಮಿ
(ರಾ.1.45) ನಕ್ಷತ್ರ: ಆರಿದ್ರ (ರಾ.3.44) ಯೋಗ: ಆಯುಷ್ಮಾನ್ (ಬೆ.10.11) ಕರಣ:ಬಾಲವ-ಕೌಲವ (ಮ.2.38-ರಾ.1.45) ಮಳೆ ನಕ್ಷತ್ರ: ಶತಭಿಷ  ಮಾಸ: ಮೀನ ತೇದಿ:01

# ರಾಶಿ ಭವಿಷ್ಯ
ಮೇಷ : ಖರ್ಚು-ವೆಚ್ಚಗಳು ಅಧಿಕವಾಗುವುದು
ವೃಷಭ : ಭೂ ಖರೀದಿ, ಮನೆ ನಿರ್ಮಾಣದಂತಹ ಕಾರ್ಯಗಳಿಗೆ ಸಕಾಲ.
ಮಿಥುನ: ಚಿಂತಿತ ಕಾರ್ಯಗಳಿಗೆ ಹಿರಿಯರ ಸಲಹೆ ಉಪಯುಕ್ತ
ಕಟಕ: ರಾಜಕೀಯ ವರ್ಗದವರಿಗೆ ಮುನ್ನಡೆ, ಆರೋಗ್ಯದಲ್ಲಿ ಸುಧಾರಣೆ
ಸಿಂಹ: ಸಾಂಸಾರಿಕ ನೆಮ್ಮದಿ ಇದ್ದರೂ ಕಿರಿಕಿರಿ ತಪ್ಪದು
ಕನ್ಯಾ: ದಾಂಪತ್ಯ ಯೋಗ ಅವಿವಾಹಿತರಿಗೆ ಅಚ್ಚರಿ ತಂದೀತು
ತುಲಾ: ಆದಾಯ ವರ್ಧನೆಗೆ ಹಲವಾರು ಅವಕಾಶಗಳು ದೊರಕಲಿವೆ
ವೃಶ್ಚಿಕ : ಸ್ವಾಭಿಮಾನ ಬದಿಗೊತ್ತಿ ಕಾರ್ಯಕ್ಕಿಳಿಯಿರಿ
ಧನುಸ್ಸು: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ಆದಾಯವೃದ್ಧಿ
ಕುಂಭ : ಮನೋಕಾಮನೆಗಳು ನೆರವೇರುತ್ತವೆ
ಮೀನ: ವಿದ್ಯಾರ್ಥಿಗಳು ತಮ್ಮ ಸಹವಾಸದೋಷದಿಂದ ಹಿನ್ನಡೆ ಅನುಭವಿಸಲಿದ್ದಾರೆ.

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments