ಜಾತಿ, ಹಣ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ : ವಾಟಾಳ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15- ಲೋಕಸಭಾ ಚುನಾವಣೆಯಲ್ಲಿ ಜಾತಿ, ಹಣ ದಬ್ಬಾಳಿಕೆ ಇರಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಜಾತಿ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದಾರೆ.

ಇದು ಸಂವಿಧಾನಕ್ಕೆ ಮತ್ತು ಚುನಾವಣಾ ಕಾಯ್ದೆಗೆ ವಿರುದ್ಧ. ಚುನಾವಣೆ ನಿಗದಿಪಡಿಸಿರುವ 70 ಲಕ್ಷ ಖರ್ಚಿಗಿಂತ 70 ಕೋಟಿ ಮೇಲೆ ಒಂದೊಂದು ಕ್ಷೇತ್ರದಲ್ಲಿ ಹಣ ಖರ್ಚಾಗಲಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಹಣ ಜಾತಿ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ. ಎಲ್ಲಾ ಪಕ್ಷದವರು ಅಭ್ಯರ್ಥಿಯ ಜಾತಿ ಹಣವನ್ನು ನೋಡಿ ಟಿಕೆಟ್ ಹಂಚುತ್ತಾರೆ ಇದು ಬಹಳ ಅತ್ಯಂತ ಘೋರ ಅನ್ಯಾಯ ಎಂದರು.

ಬೇರೆ ರಾಜ್ಯದ ಲೋಕಸಭಾ ಸದಸ್ಯರುಗಳು ತಮ್ಮ ರಾಜ್ಯದ ಸಮಸ್ಯೆ ಬಂದಾಗ ತೀವ್ರವಾಗಿ ಲೋಕಸಭೆಯಲ್ಲಿ ಹೋರಾಟ ಮಾಡುತ್ತಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳಿದ್ದರು ನಮ್ಮ ಸದಸ್ಯರೂ ಒತ್ತಾಯ ಮಾಡಲಿಲ್ಲ ಜನರು ಅದನ್ನು ಅರಿತು ಸಮಸ್ಯೆಗಳ ಬಗ್ಗೆ ತೀವ್ರವಾದ ಚರ್ಚೆ ಪ್ರತಿಭಟನೆ ಸಭಾ ತ್ಯಾಗ ಮಾಡುವಂತವರಿಗೆ ಮತ ಹಾಕಬೇಕು. ಮತದಾರರು ಯಾವ ಪಕ್ಷಕ್ಕೆ ಮತದಾನ ಮಾಡಬೇಕು ಎಂದು ಯೋಚಿಸಿ ಎಚ್ಚರ ವಹಿಸಿ ಪ್ರಮಾಣಿಕರನ್ನು ಆಯ್ಕೆ ಮಾಡುವಂತೆ ವಾಟಾಳ್ ತಿಳಿಸಿದರು.

Facebook Comments