ರೌಡಿ ದೇವರಾಜ್ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್,ಮಾ, 15- ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಆನೇಕಲ್ ತಾಲ್ಲೂಕಿನ ಎಂ.ಮೇಡಹಳ್ಳಿ ಬಳಿ ನಡೆದಿದೆ. ಮೃತ ದೇವರಾಜ್(23) ಹಳೆ ರೌಡಿ ಶೀಟರ್ ಆಗಿದ್ದು ಹಲವು ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದ್ದು ದುಷ್ಕರ್ಮಿಗಳ ತಂಡ ದೇವರಾಜ್ ನನ್ನು ಎಂ.ಮೇಡಹಳ್ಳಿಯ ಲೇಔಟ್ ಒಂದರ ಗೇಟ್ ಬಳಿ ಕರೆಸಿಕೊಂಡು ಹೊಟ್ಟೆ ಹಾಗು ತಲೆಯ ಭಾಗಕ್ಕೆ ಲಾಂಗು ಮಚ್ಚುಗಳಲ್ಲಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ದೇವರಾಜ್ ಆನೇಕಲ್ ಪೋಲಿಸ್ ಠಾಣೆಯಲ್ಲಿ 5 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಇತ್ತೀಚೆಗೆ ಹೊರಬಂದಿದ್ದ,ಕೊಲೆಗೆ ವೈಯಕ್ತಿಕ ದ್ವೇಷ ಕಾರಣ ಎಂಬುದು ಮೆಲ್ನೋಟಕ್ಕೆ ಕಂಡು ಬಂದಿದೆ.  ಪ್ರಕರಣ ದಾಖಲು ಮಾಡಿಕೊಂಡ ಅತ್ತಿಬೆಲೆ ಪೋಲಿಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Facebook Comments