ಇಂದಿನ ಪಂಚಾಗ ಮತ್ತು ರಾಶಿಫಲ (16-03-2019- ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇತರರ ಸ್ವತ್ತನ್ನು ಅಪಹರಿಸುವ ಇಚ್ಛೆ ಯುಳ್ಳ ಚಾಡಿಕೋರನು ತಾನಾಗಿಯೇ ಹಾಳಾಗುತ್ತಾನೆ. ದೊಡ್ಡ ದೀಪವನ್ನು ನುಂಗಲು ಹೊರಟ ಪತಂಗದ ಹುಳು ಸುಟ್ಟು ಹೋಗದೆ ಇದ್ದೀತೆ?  -ವಿಶ್ವಗುಣಾದರ್ಶ

# ಪಂಚಾಂಗ :ಶನಿವಾರ, 16.03.2019
ಸೂರ್ಯ ಉದಯ ಬೆ.06.27 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಮ.01.53 / ಚಂದ್ರ ಅಸ್ತ ರಾ.03.04
ವಿಲಂಬಿ ಸಂವತ್ಸರ / ಉತ್ತರಾಯಣ/ ಶಿಶಿರ ಋತು /ಫಾಲ್ಗುಣ ಮಾಸ / ಶುಕ್ಲಪಕ್ಷ / ತಿಥಿ : ದಶಮಿ
(ರಾ.11.33) ನಕ್ಷತ್ರ: ಪುನರ್ವಸು (ರಾ.02.13) ಯೋಗ: ಸೌಭಾ-ಶೋಭ (ಬೆ.07.35-ರಾ.04.31) ಕರಣ: ತೈತಿಲ-ಗರಜೆ (ಮ.12.43-ರಾ.11.33)  ಮಳೆ ನಕ್ಷತ್ರ: ಶತಭಿಷ ಮಾಸ: ಮೀನ ತೇದಿ: 02

# ರಾಶಿ ಭವಿಷ್ಯ

ಮೇಷ: ವಿದ್ಯಾರ್ಥಿಗಳು ಓದಿನಲ್ಲಿ ಪ್ರತಿಭೆ ತೋರುವರು. ಸಂಗೀತದಲ್ಲಿ ಆಸಕ್ತಿ ಇರುವುದು
ವೃಷಭ: ಹಲವಾರು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಶುಭವಾಗುವುದು
ಮಿಥುನ: ನಿಮ್ಮ ಬುದ್ಧಿ ಚಾತುರ್ಯ ಸಮಯಕ್ಕೆ ಅನುಕೂಲವಾಗುವುದಿಲ್ಲ
ಕಟಕ: ಕುಟುಂಬದಲ್ಲಿ ಹಲ ವಾರು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
ಸಿಂಹ: ಯಾವ ಕೆಲಸವಾದರೂ ಸರಿ ಧೈರ್ಯದಿಂದ ಮಾಡುವಿರಿ
ಕನ್ಯಾ: ಮಾನಸಿಕ ತೊಂದರೆ ಅನುಭವಿಸುವಿರಿ
ತುಲಾ: ಪ್ರಯಾಣ ಕಾಲದಲ್ಲಿ ದೇವರ ಪ್ರಾರ್ಥನೆ ಮಾಡಿ
ವೃಶ್ಚಿಕ: ದುಷ್ಟರು ಹಾನಿ ಮಾಡಲು ಹೊಂಚು ಹಾಕುವರು
ಧನುಸ್ಸು: ಲಾಭದಾಯಕ ವ್ಯಾಪಾರವಿರುವುದು
ಮಕರ: ಬಂಧು-ಮಿತ್ರರಿಂದ ಗೌರವಿಸಲ್ಪಡುವಿರಿ
ಕುಂಭ: ಶತ್ರುಗಳು ಚಿಂತಿಸುವಂತೆ ಮಾಡುವಿರಿ
ಮೀನ: ದಾನ-ಧರ್ಮ ಮಾಡಿ ಶುಭವಾಗುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments