ಚಿಕ್ಕಪ್ಪನ ಕೊಲೆ ಪ್ರಕರಣ : ಚಂದ್ರಬಾಬು ನಾಯ್ಡು ಮೇಲೆ ಜಗನ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಮಾ.16-ಮಾಜಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ ವೈ.ಎಸ್.ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣದ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕೈವಾಡವಿದೆ ಎಂದುಪ್ರತಿಪಕ್ಷ ನಾಯಕ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತೆಲುಗುದೇಶಂ ಪಾರ್ಟಿ ಪರಮೋಚ್ಛ ನಾಯಕ ಸಾರಸಗಾಟಾಗಿ ತಳ್ಳಿ ಹಾಕಿದ್ದಾರೆ. ನಿನ್ನೆ ಕಡಪ ಜಿಲ್ಲೆಯ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಅವರ ಶವ ಪತ್ತೆಯಾಗಿದ್ದು, ಮನೆಯ ಶಯನ ಕೊಠಡಿ ಮತ್ತು ಶೌಚಾಲಯದಲ್ಲಿ ರಕ್ತದ ಕಲೆಗಳಿರುವ ಬಟ್ಟೆಗಳು ಪತ್ತೆಯಾಗಿತ್ತು.

ರೆಡ್ಡಿ ಅವರ ಸಾವು ಸ್ವಾಭವಿಕವಲ್ಲ. ಅದು ಅಸಹಜ ಸಾವು ಎಂದು ಕುಟುಂಬ ವರ್ಗದವರು ಅನುಮಾನ ವ್ಯಕ್ತಪಡಿಸಿದ್ದರು. ಈಗ ಕಡಪ ಪೊಲೀಸರು ವಿವೇಕಾನಂದ ರೆಡ್ಡಿಯವರು ಕೊಲೆಯನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆ ಟಿಡಿಪಿಯ ಪ್ರಭಾವಕ್ಕೊಳಪಟ್ಟಿದೆ. ಅದು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತದೆ ಎಂಬ ಬಗ್ಗೆ ತನಗೆ ನಂಬಿಕೆ ಇಲ್ಲ. ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ತನ್ನ ಚಿಕ್ಕಪ್ಪನ ಹತ್ಯೆಯ ಹಿಂದೆ ಟಿಡಿಪಿ ಕೈವಾಡವಿರುವ ಸಾಧ್ಯತೆ ಇದೆ. ಯಾಕೆಂದರೆ ಪ್ರತಿಬಾರಿ ನನ್ನ ಕುಟುಂಬದಲ್ಲಿ ಕೊಲೆ ಸಂಭವಿಸಿದಾಗಲೆಲ್ಲ ನಾಯ್ಡು ಅವರಆಡಳಿತವಿರುತ್ತದೆ ಎಂದರು.

ನಾಯ್ಡು ನಿರಾಕರಣೆ: ತಮ್ಮ ವಿರುದ್ದ ಜಗನ್ ಮೋಹನ್ ರೆಡ್ಡಿ ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ತಳ್ಳಿ ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ವಿನಾಕಾರಣ ವಿವಾದ ಸೃಷ್ಟಿಸಲು ತಮ್ಮ ಮತ್ತು ಪಕ್ಷದ ವಿರುದ್ಧ ವೈಎಸ್‍ಆರ್ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Facebook Comments