ಎಟಿಎಂ ಕಾರ್ಡ್, ಡಾಲರ್ಸ್ ಹಿಂದುರಿಗಿಸಿ ಪ್ರಾಮಾಣಿಕತೆ ಮರೆದ ಆಟೋ ಚಾಲಕ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಮಾ.18 -ಬೆಂಗಳೂರಿನ ನಿವಾಸಿಗಳಾದ ಎಂ.ಸಿ.ಎನ್ ಕುಮಾರ, ಎರುಮಳೆ ಕುಮಾರಿ ಪದ್ಮಿನಿ ಎಂಬುವವರು ನಿನ್ನೆ ಹುಬ್ಬಳ್ಳಿಗೆ ತಮ್ಮ ಕೆಲಸಕ್ಕೆ ಬಂದಿದ್ದರು.ಕಾಟನ್ ಕೌಂಟಿ ಕ್ಲಬ್‍ದಲ್ಲಿ ವಾಸ್ತವ್ಯ ಮಾಡಿ ಮಾರ್ಕೆಟಿಗೆ ಹೋಗಲು ಅಂತಾ ಹುಬ್ಬಳ್ಳಿ ಗೋಕುಲರೋಡ ಏರ್ ಪೊೀರ್ಟ ಎದುರಿಗೆ ಇರುವ ಆಟೋ ನಿಲ್ದಾಣದಿಂದ ಮುಂಜಾನೆ 10 ಗಂಟೆಗೆ ರಿಕ್ಷಾದಲ್ಲಿ ಪ್ರಯಾಣಿಸಿಕೊಂಡು ಹುಬ್ಬಳ್ಳಿ ದುರ್ಗದ ಬೈಲಿಗೆ ಹೋಗಿ ಇಳಿಯುವಾಗ ಆಟೋ ರಿಕ್ಷಾದಲ್ಲಿ ತಮ್ಮ ಬ್ಯಾಗನ್ನು ಬಿಟ್ಟು ಇಳಿದು ಹೋಗಿದ್ದರು.

ನಂತರ ಆಟೋ ಚಾಲಕ ಗೋಕುಲರೋಡ ಆಟೋ ನಿಲ್ದಾಣಕ್ಕೆ ಬಂದು ನೋಡಿದಾಗ ಬ್ಯಾಗ್ ಕಂಡು ಬಂದಿದ್ದನ್ನು ತೆಗೆದುಕೊಂಡು ಬಂದು ಗೋಕುಲರೋಡ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾನೆ.ಅದರಲ್ಲಿ ಎ.ಟಿ. ಎಂ. ಕಾರ್ಡಗಳು, ಗುರುತಿನ ಚೀಟಿಗಳು ಹಾಗೂ ನಗದು ಹಣ 3,000/- ರೂ ಹಾಗೂ ಡಾಲರ್ಸ ಕರೆನ್ಸಿಗಳು ಇದ್ದವು.

ನಂತರ ಅದರ ಮಾಲಿಕರಾದ ಎಂ.ಸಿ.ಎನ್ ಕುಮಾರ ಹಾಗೂ ಪದ್ಮಿನಿ ಎಂಬುವವರಿಗೆ ಪೊಲೀಸರು ಠಾಣೆಗೆ ಕರೆಯಿಸಿ ಪ್ರಾಮಾಣಿಕತೆ ಮೆರೆದ ಗೋಕುಲ ಗ್ರಾಮದ ಆಟೋ ರಿಕ್ಷಾ ಚಾಲಕ ಶಬ್ಬೀರ್ ಅಹ್ಮದ್ ಹನೀಪಸಾಬ ಅತ್ತಾರ, ಇವರ ಮುಖಾಂತರ ಮರಳಿಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಅಟೋ ಚಾಲಕನಿಗೆ ಗೋಕುಲರೋಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಡಿ. ಪಿ. ನಿಂಬಾಳಕರ ಹಾಗೂ ಸಿಬ್ಬಂದಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )