ಇಂದಿನ ಪಂಚಾಗ ಮತ್ತು ರಾಶಿಫಲ (18-03-2019- ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮಹಾತ್ಮರ ಮನಸ್ಸು ಐಶ್ವರ್ಯ ಬಂದಾಗ ಕನ್ನೈದಿಲೆಯಂತೆ ಮೃದುವಾಗಿರುತ್ತದೆ. ಕಷ್ಟಗಳು ಬಂದಾಗ ದೊಡ್ಡ ಬೆಟ್ಟದ ಮೇಲಿರುವ ಕಲ್ಲುಗಳ ರಾಶಿಯಂತೆ ಕಠಿಣವಾಗಿರುತ್ತದೆ.  -ನೀತಿಶತಕ

# ಪಂಚಾಂಗ :ಸೋಮವಾರ, 18.03.2019
ಸೂರ್ಯ ಉದಯ ಬೆ.06.25 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಮ.03.57 / ಚಂದ್ರ ಅಸ್ತ ರಾ.04.56
ವಿಲಂಬಿ ಸಂವತ್ಸರ / ಉತ್ತರಾಯಣ/ ಶಿಶಿರ ಋತು /ಫಾಲ್ಗುಣ ಮಾಸ / ಶುಕ್ಲಪಕ್ಷ / ತಿಥಿ : ದ್ವಾದಶಿ
(ಸಾ.05.44) ನಕ್ಷತ್ರ: ಆಶ್ಲೇಷ (ರಾ.09.46) ಯೋಗ: ಸುಕರ್ಮ (ರಾ.09.17) ಕರಣ: ಭವ-ಬಾಲವ-ಕೌಲವ (ಬೆ.07.20-ಸಾ.05.44-ರಾ.04.03)   ಮಳೆ ನಕ್ಷತ್ರ: ಉತ್ತರಾಭಾದ್ರ  ಮಾಸ: ಮೀನ  ತೇದಿ: 04

# ರಾಶಿ ಭವಿಷ್ಯ

ಮೇಷ: ಭಗವಂತನ ಆಶೀರ್ವಾದ ನಿಮ್ಮ ಮೇಲಿದೆ
ವೃಷಭ: ಕುಟುಂಬದಲ್ಲಿ ವೈರತ್ವ ಕಂಡುಬರುವುದು
ಮಿಥುನ: ಕಷ್ಟಗಳನ್ನು ಎದುರಿಸಿ ಮುಂದೆ ಹೋಗುವ ಸಾಮಥ್ರ್ಯ ನಿಮಗೆ ಇರುವುದು
ಕಟಕ: ಹಣಕ್ಕಾಗಿ ಹೆಚ್ಚು ತೊಂದರೆಗಳನ್ನು ಎದುರಿಸುವಿರಿ
ಸಿಂಹ: ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯವಿರುವುದು
ಕನ್ಯಾ: ವಾಹನದಲ್ಲಿ ಚಲಿಸು ವಾಗ ಸ್ವಲ್ಪ ಜಾಗ್ರತೆ ವಹಿಸಿದರೆ ಉತ್ತಮವಾಗಿರುವುದು
ತುಲಾ: ಕೆಲವು ಸಂದರ್ಭ ಗಳಲ್ಲಿ ಮುಜುಗರಕ್ಕೆ ಒಳಗಾಗುವಿರಿ
ವೃಶ್ಚಿಕ: ಹಣದ ವಿಷಯದಲ್ಲಿ ಯಾವ ತೊಂದರೆಯೂ ಇರುವುದಿಲ್ಲ. ಶುಭ ಕಾರ್ಯ ಮಾಡುವಿರಿ
ಧನುಸ್ಸು: ಅನೇಕ ಕಷ್ಟಗಳಿಗೆ ಗುರಿಯಾಗುವಿರಿ
ಮಕರ: ತಾಯಿಯಿಂದ ಒಳ್ಳೆ ಸುದ್ದಿ ಕೇಳುವಿರಿ
ಕುಂಭ: ಕುಟುಂಬದ ವ್ಯಕ್ತಿ ದೂರ ಸರಿಯುವರು
ಮೀನ: ಅತಿಥಿಗಳ ಸತ್ಕಾರ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )