ಮತದಾನ ಜಾಗೃತಿಗಾಗಿ ಆಕಾಶಕ್ಕೆ ಹಾರಿದ ಪ್ಯಾರಾಮೋಟಾರ್

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ ಮಾ.18- ಲೋಕಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ಮತದಾನ ಅಮೂಲ್ಯ, ತಪ್ಪದೇ ಮತದಾನ ಮಾಡಿ ಎಂಬ ಘೋಷಣೆಯನ್ನೊತ್ತು ಹಾರಿದ ಪ್ಯಾರಾಮೋಟಾರ್ ಆಗಸದ ತುಂಬೆಲ್ಲಾ ಹಾರಾಡುವ ಮೂಲಕ ಮತ ಜಾಗೃತಿಯ ಅರಿವನ್ನು ಮೂಡಿಸಿತು.

ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಬೇಸ್ (ಬೆಂಗಳೂರು ಏವಿಯೇಷನ್ ಆಂಡ್ ಸೋಟ್ರ್ಸ್ ಎಂಟರ್‍ಪ್ರೈಸಸ್) ಸಂಸ್ಥೆಯ ಪ್ಯಾರಾಮೋಟಾರ್ ಚಾಲಕರಾದ ಸಿದ್ದಾರ್ಥ ಹಾಗೂ ಸುನೀಲ್ ಅವರು ನೆಲ ಮಟ್ಟದಿಂದ 200 ರಿಂದ 300 ಅಡಿಯವರೆಗೆ ಹಾರಾಡುತ್ತಾ ರೋಚಕ ಕ್ಷಣಗಳಿಗೆ ಸಾಕ್ಷಿಯಾದರು.

ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ ಸಿಇಓ ಬಸವರಾಜೇಂದ್ರ ಪತ್ರಕರ್ತರೊಂದಿಗೆ ಮಾತನಾಡಿ, ಚುನಾವಣಾ ಜಾಗೃತಿಯ ಸ್ವೀಪ್ ಕಾರ್ಯಕ್ರಮಗಳು ಜನವರಿ 25 ರಿಂದ ಆರಂಭವಾಗಿವೆ. ಮತದಾರರಲ್ಲಿ ಮತದಾನದ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದ್ದು, ಈ ಪ್ಯಾರಾ ಮೋಟಾರ್ ಹಾರಾಟ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಎಂದರು.

ಪ್ರಮುಖವಾಗಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಂತರ ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )