ನುಗ್ಗೆಕಾಯಿ ಮಹಿಮೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಈ ಗಿಡ ಎಲೆ, ಹೂವು, ತೊಗಟೆ, ಬೇರು ಮೊದಲಾದವುಗಳನ್ನು ಔಷಧದ ರೂಪದಲ್ಲಿ ಬಳಸುವ ಪರಿಪಾಠ ದಕ್ಷಿಣ ಭಾರತದಲ್ಲಿ ಇದೆ.  ಮೂಲತಃ ಏಷ್ಯಾ ಪ್ರದೇಶದ ಸಸ್ಯವಾಗಿರುವ ನುಗ್ಗೆಗಿಡವು, ತನ್ನ ಪೌಷ್ಟಿಕಾಂಶದ ಗುಣದಿಂದಾಗಿ ಜಗತ್ತಿನಾದ್ಯಂತ ಪ್ರಸಾರಗೊಂಡಿದೆ. ನುಗ್ಗೆಯಲ್ಲಿರುವ ಜಿಂಕ್ ಅಂಶವು ಮನುಷ್ಯನಲ್ಲಿ ಸಂತಾನೋತ್ಪತ್ತಿಯ ಶಕ್ತಿಯನ್ನು ದೃಢಗೊಳಿಸುತ್ತದೆ.

ನುಗ್ಗೆಯಲ್ಲಿರುವ ಹೇರಳವಾಗಿರುವ ಪೌಷ್ಟಿಕಾಂಶಗಳು : ಜಿಂಕ್,  ಕ್ಯಾಲ್ಶಿಯಂ,  ಮೆಗ್ನೀಷಿಯಂ,  ಮ್ಯಾಂಗನೀಸ್ 0.36 ಮಿಲಿಗ್ರಾಂ. ಪೊಟಾಶಿಯಂ 337 ಮಿಲಿಗ್ರಾಂ. ಕಬ್ಬಿಣ 4 ಮಿಲಿಗ್ರಾಂ. ಗಂಧಕ 112 ಮಿಲಿಗ್ರಾಂ. ವಿಟಮಿನ್ ಬಿ1, ಬಿ12, ಎ, ನಿಯಾಸಿನ್, ವಿಟಮಿನ್ ಬಿ6, ವಿಟಮಿನ್ ಸಿ ಮತ್ತಿತರ ಅಂಶಗಳೂ ಇದರಲ್ಲಿವೆ. ನುಗ್ಗೆೆ ಎಲೆ ಮತ್ತು ನುಗ್ಗೆಕಾಯಿಯನ್ನು  ಪಡೆಯಬಹುದು.

ಇತರ ತರಕಾರಿಯ ಸಾಂಬಾರು ಮಾಡಿದಂತೆಯೇ ಇದರ ಸಾಂಬಾರು ಮಾಡಬಹುದು. ಆಲೂಗಡ್ಡೆ ಅಥವಾ ಬದನೆಕಾಯಿಯನ್ನು ತುಸು ಬೆರೆಸಿದರೆ ರುಚಿ ಜಾಸ್ತಿ. . ವಿವಿಧ ರೀತಿಯ ಸಲಾಡ್ ಜೊತೆಯಲ್ಲಿ, ನುಗ್ಗೆೆಯ ಎಲೆಯನ್ನು ಚಿಕ್ಕದಾಗಿ ಹೆಚ್ಚಿ  ಸರ್ವ್ ಮಾಡಬಹುದು. ನುಗ್ಗೆ ಹೂವನ್ನು ಸಹ ಇತರ ತರಕಾರಿಗಳ ಸಲಾಡ್ ಜೊತೆ ಮಿಶ್ರಣ ಮಾಡಬಹುದು.

ನುಗ್ಗೆ ಕಾಯಿಯ ಪಲ್ಯವನ್ನು ಮಾಡಿ ಸೇವಿಸಿದರೆ, ತ್ವರಿತವಾಗಿ ಹೆಚ್ಚು ಪೌಷ್ಟಿಕಾಂಶವನ್ನು ಪಡೆಯಲು ಸಾಧ್ಯ.  ನುಗ್ಗೆಗಿಡದ ಬೇರನ್ನು ಅಸ್ತಮಾ, ಹೊಟ್ಟೆೆಯ ತೊಂದರೆ, ಅಸಿಡಿಟಿ ಮೊದಲಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಬಹುದು.

ನುಗ್ಗೆ ಎಲೆಗಳನ್ನು ಉತ್ತಮ ಆರೋಗ್ಯಕ್ಕಾಾಗಿ, ಪೌಷ್ಟಿಕತೆಗಾಗಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸಬಹುದು. ಭಾರತದ ಹಲವು ಪ್ರದೇಶಗಳಲ್ಲಿ ನುಗ್ಗೆೆ ಎಲೆಗಳನ್ನು, ಎಲೆಯ ರಸವನ್ನು ಔಷಧವಾಗಿಯೂ ಉಪಯೋಗಿಸುವರು. ಎಲೆಗಳನ್ನು ಆಹಾರದ ರೂಪದಲ್ಲಿ ಸೇವಿಸುವುದರಿಂದ, ಕ್ಯಾಲ್ಷಿಯಂ, ಪೊಟಾಶಿಯಂ ಮತ್ತು ಹಲವು ವಿಟಮಿನ್‌ಗಳನ್ನು ಪಡೆಯಬಹುದು.

ನುಗ್ಗೆಕಾಯಿ ಮತ್ತು ನುಗ್ಗೆೆ ಸೊಪ್ಪನ್ನು ಅಡುಗೆಯಲ್ಲಿ ಬಳಸುವ ಮೂಲಕ ನುಗ್ಗೆೆಯಲ್ಲಿರುವ ವಿವಿಧ ಸ್ವರೂಪದ ಪೌಷ್ಟಿಕಾಂಶಗಳನ್ನು  ಸುಲಭವಾಗಿ ಪಡೆಯಬಹುದು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )