ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 4.5 ಲಕ್ಷ ಮೌಲ್ಯದ ಕುಕ್ಕರ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಮಾ. 19 : ಲೋಕಸಭಾ ಚುನಾವಣೆಗೆ ಇನ್ನು ತಿಂಗಳು‌ ಬಾಕಿ ಇದೆ ; ಆದರೆ ಮತದಾರರನ್ನು ಸೆಳೆಯಲು ಅದರಲ್ಲೂ ಮಹಿಳಾ ‌ಮತದಾರರನ್ನು ಸೆಳೆಯಲು ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 4.5 ಲಕ್ಷ ಮೌಲ್ಯದ 168 ಪ್ರಸ್ಟೀಜ್ ಕುಕ್ಕರ್ ಗಳನ್ನು ಚುನಾವಣಾ ಪ್ಲೈಂಗ್ ಸ್ಕ್ವಡ್ ತಂಡ ವಶಕ್ಕೆ ಪಡೆದಿದೆ.

ಸಕಲೇಶಪುರ ತಾಲ್ಲೂಕು ಯಸಳೂರು ಠಾಣೆ ವ್ಯಾಪ್ತಿಯಲ್ಲಿ ಮೈಸೂರಿನ ನವ್ಕಾರ್ ಮಾರ್ಕೆಟಿಂಗ್ ಮೂಲಕ ಖರೀದಿಸಿದ ಕುಕ್ಕರ್ ಗಳನ್ನ ಸಕಲೇಶಪುರ ಹೆತ್ತೂರು ಹೋಬಳಿಯ ಹಳ್ಳಿಬೈಲುವಿನ ಏಕ ರೆಸಾರ್ಟ್ ಗೆ ರವಾನಿಸಲಾಗುತಿತ್ತು.

ಈ ವೇಳೆ ಪ್ಲಯಿಂಗ್ ಸ್ಕ್ವಡ್ ಅಧಿಕಾರಿ ಆಧಿತ್ಯಾ ಎಚ್.ಎ ಹಾಗೂ ಯಸಳೂರು ಪೊಲೀಸ್ ಉಪನಿರೀಕ್ಷಕ ಉಮೇಶ್‌ ನೇತೃತ್ವದಲ್ಲಿ ಕಾರ್ಯಚರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಕುಕ್ಕರ್ ಗಳನ್ನು ಉಡುಗೊರೆಯಾಗಿ ನೀಡಲು ಖರೀದಿಸಲಾಗಿದೆ ಎಂದು‌ ಎಕ ರೆಸಾರ್ಟ್ ‌ಮಾಲೀಕ ಹಣದ ರಶೀದಿಯಲ್ಲಿ ಉಲ್ಲೇಖಿಸಿದ್ದು‌ ಹಲವು‌ ಅನುಮಾನಕ್ಕೆ‌ ಕಾರಣವಾಗಿದೆ.

ಚುನಾವಣಾ ಸಮಯದಲ್ಲಿ ಈ ಕುಕ್ಕರ್ ಆಫರ್ ತರಲಾಗಿದೆ ಎಂದು ಅನುಮಾನಿಸಲಾಗಿದ್ದು; ಚುನಾವಣ ಪೂರ್ವ ಜಿಲ್ಲೆಯಲ್ಲಿ‌ ಈ ರೀತಿಯ‌ ಹಲವು‌ ಪ್ರಕರಣ ಬೆಳಕಿಗೆ‌ ಬರುತ್ತಿದ್ದು‌ ಇನ್ನು‌ ಚುನಾವಣೆ ಮುಗಿಯುವ ವೇಳೆಗೆ ಎಷ್ಟು ಪ್ರಕರಣ ಬೆಳಕಿಗೆ ಬರಬಹುದು ಎಂದು ‌ಕಾದು ನೊಡಬೇಕಿದೆ .  ಆದರೆ ಮತದಾರರನ್ನು ಸೆಳೆಯಲು‌‌ ರಾಜಕೀಯ ಪಕ್ಷದವರು ಇನ್ನೂ‌ ಏನೇನು ತಂತ್ರ ರೂಪಿಸುವರು ದೇವರೆ ಬಲ್ಲಾ….!

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin