ಮಳೆ ಹುಡುಗಿ ಪೂಜಾಗಾಂಧಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.19- ಹೋಟೆಲ್‍ವೊಂದರಲ್ಲಿ ರೂಂ ಪಡೆದು ಪೂರ್ತಿ ಬಿಲ್ ಪಾವತಿಸದ ನಟಿ ಪೂಜಾಗಾಂಧಿ ವಿರುದ್ಧ ಖಾಸಗಿ ಹೋಟೆಲ್‍ನವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಟಿ ಪೂಜಾಗಾಂಧಿ ಅವರು ಖಾಸಗಿ ಹೋಟೆಲ್‍ವೊಂದರಲ್ಲಿ ರೂಂ ಪಡೆದಿದ್ದರು. ಆ ವೇಳೆ 22ಲಕ್ಷ ರೂ. ಬಿಲ್ ಆಗಿತ್ತು ಎಂದು ಹೇಳಲಾಗಿದೆ.

ರೂಂ ಖಾಲಿ ಮಾಡುವಾಗ ಸ್ವಲ್ಪ ಹಣವನ್ನು ಪಾವತಿಸಿ 4.5ಲಕ್ಷ ರೂ. ಬಿಲ್‍ನ್ನು ಉಳಿಸಿಕೊಂಡಿದ್ದರು ಎನ್ನಲಾಗಿದ್ದು, ಈ ಸಂಬಂಧ ಹೋಟೆಲ್‍ನವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಮಾ. 11ರಂದು ಪೂಜಾ ಗಾಂಧಿ ವಿರುದ್ಧ ದೂರು ನೀಡಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಪೂಜಾಗಾಂಧಿ ಅವರನ್ನು ಠಾಣೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು.

ಈ ವೇಳೆ ಪೊಲೀಸರ ಸಮ್ಮುಖದಲ್ಲಿ 2ಲಕ್ಷ ರೂ. ನೀಡಿದ ಪೂಜಾಗಾಂಧಿ ಅವರು ಉಳಿದ ಹಣ ಪಾವತಿಗಾಗಿ ಕಾಲಾವಕಾಶ ಕೋರಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin