ಹಾಸನಕ್ಕೆ ದೇವೇಗೌಡರು ಬಂದ್ರು ನಾನೇ ಬಿಜೆಪಿ‌ ಅಭ್ಯರ್ಥಿ : ಎ. ಮಂಜು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಮಾ. 19 : ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ದೇವೆಗೌಡರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು ಸಹ ನಾನು ಬಿಜೆಪಿ ಪಕ್ಷದಿಂದ ಹಿಂಬರುವ ಪ್ರಶ್ನೆಯೇ ಇಲ್ಲ ಮುಂದಿಟ್ಟ ಹೆಜ್ಜೆ ಹಿಂದೆ ಇಡುವವನಲ್ಲ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.

ಚನ್ನರಾಯಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ತಾಲ್ಲೂಕು ಮಟ್ಟದ ಪಧಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಸೋಲಿನ ಭೀತಿಯಿಂದ ದೇವೆಗೌಡರನ್ನು ಅಭ್ಯರ್ಥಿಯಾಗಿಸುವ ಮಾತು ಕೇಳಿ ಬರುತ್ತಿದೆ.

ತಾವು ಹಿಂದೆ ದೇವೇಗೌಡರು ಅಭ್ಯರ್ಥಿಯಾದರೆ ಅವರ ಪರ ಕೆಲಸ ಮಾಡುವುದಾಗಿ ಹೇಳಿದ್ದು ನಿಜವಾದರೂ ಅದು ಮೊಮ್ಮಗನನ್ನು ಅಭ್ಯರ್ಥಿಯನ್ನಾಗಿಸುವ ಮುನ್ನಾ. ಆದರೆ, ಈಗ ಅವರೇ ಅಭ್ಯರ್ಥಿಯಾದರೂ‌ ನಾನು ಬಿಜೆಪಿ ಬಿಟ್ಟು ಬರುವ ಸ್ಥಿತಿಯಲ್ಲಿಲ್ಲ.

ಈಗಾಗಲೇ ಬಿಜೆಪಿಗೆ ಸೇರುವ ಮುನ್ನಾ ಎಂಟು ತಾಲ್ಲೂಕುಗಳ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ಪಕ್ಷ ಸೇರ್ಪಡೆಗೊಂಡಿದ್ದೇನೆ.

ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ಮತ್ತು ಜಿಲ್ಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವುದು ನನ್ನ ಗುರಿ. 1989ರಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮಾಡಿದ್ದ ಸಾಧನೆಯನ್ನು ಪನರಾವರ್ತಿಸುವ ಮೂಲಕ ಗೆದ್ದು ಮೋದಿ ಅವರನ್ನು ಬಲಪಡಿಸುವುದು ನಿಶ್ಚಿತ ಎಂದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin