ಓವೈಸಿ ಬಳಿ 13 ಕೋಟಿ ಆಸ್ತಿ ಇದೆ, ಆದರೆ ಕಾರಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಮಾ.19- ಎಐಎಂಐಎಂ ಪಕ್ಷದ ಅಧ್ಯಕ್ಷರಾಗಿರುವ ಹೈದರಾಬಾದ್ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ಅವರು ಹದಿಮೂರು ಕೋಟಿಯ ಆಸ್ತಿಯ ಒಡೆಯ. ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ರ್ಪಸಲು ಇಂದು ನಾಮಪತ್ರ ಸಲ್ಲಿಸಿರುವ ಓವೈಸಿ ತಮ್ಮ ಆಸ್ತಿ-ಪಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಆ ಪ್ರಕಾರ ಓವೈಸಿ ಅವರ ಸ್ಥಿರಾಸ್ತಿ 12 ಕೋಟಿ ರೂ. ಮತ್ತು ಚರಾಸ್ತಿ 1.67 ಕೋಟಿ ರೂ. ಎಂಬುದು ಖಚಿತಪಟ್ಟಿದೆ. ಇದನ್ನು ಓವೈಸಿ ಅವರು ಇಂದು ಸಲ್ಲಿಸಿರುವ ನಾಮಪತ್ರ ಜತೆಗಿನ ಅಫಿದಾವಿತ್ನಲ್ಲಿ ಘೋಷಿಸಿಕೊಂಡಿದ್ದಾರೆ.

ಅಂದ ಹಾಗೆ ಓವೈಸಿ ಅವರ ಬಳಿ ಯಾವುದೇ ಮೋಟಾರು ವಾಹನ ಇಲ್ಲ, ಆದರೆ ಅವರ ಬಳಿ ಒಂದು ಎನ್ಪಿ ಬೋರ್ ಪಾಯಿಂಟ್ 22 ಪಿಸ್ತೂಲು ಇದೆ, ಇದರ ಅಂದಾಜು ಮೌಲ್ಯ 1 ಲಕ್ಷ ರೂ. ಮತ್ತು ಇನ್ನೊಂದು ಎನ್ಪಿ ಬೋರ್ 30 – 60 ರೈಫಲ್ ಇದೆ; ಇದರ ಮೌಲ್ಯ 1 ಲಕ್ಷ ರೂ.

ಓವೈಸಿ ಅವರಿಗೆ ಸಾಲ ಬಾಧ್ಯತೆಯೂ ಇದೆ. ಅದು 9.30 ಕೋಟಿ ರೂ. ಗಳದ್ದಾಗಿದೆ.  ಪ್ರಸ್ತುತ ಅವರು ಕೈಯಲ್ಲಿ 2 ಲಕ್ಷ ರೂ. ನಗದನ್ನು ಹೊಂದಿದ್ದಾರೆ. 2017-18ರ ಅವಧಿಯಲ್ಲಿ ಅವರ ಆದಾಯ 10,01,080 ರೂ. ಇದು 2016-17ರ ಅವಧಿಯಲ್ಲಿ 13,33,250 ರೂ. ಇತ್ತು.

ಅವರ ವಿರುದ್ಧ ಐದು ಅಪರಾಧ ಪ್ರಕರಣಗಳು ಬಾಕಿ ಇವೆ. ಯಾವುದೇ ಪ್ರಕರಣದಲ್ಲಿ ಅವರನ್ನು ಕ್ರಿಮಿನಲ್ ಅಪರಾಧಿ ಎಂದು ಘೋಷಿಸಲಾಗಿಲ್ಲ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )