ಬ್ರೇಕಿಂಗ್ : ಧಾರವಾಡಲ್ಲಿ ಭೀಕರ ದುರಂತ, ನಿರ್ಮಾಣಹಂತದ ಕಾಂಪ್ಲೆಕ್ಸ್ ಕುಸಿತ, ಹಲವರು ಸಾವನ್ನಪ್ಪಿರುವ ಶಂಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ, ಮಾ.19-ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದ ಕಾರಣ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಕುಮಾರೇಶ್ವರ ನಗರದಲ್ಲಿ ನಡೆದಿದೆ.

ಮಾಜಿ ಸಚಿವ ವಿನಯ್‍ಕುಲಕರ್ಣಿ ಅವರ ಮಾವ (ಪತ್ನಿ ತಂದೆ) ಒಡೆತನದಲ್ಲಿ ಸುಮಾರು 10 ಅಂತಸ್ತಿನ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕಾಮಗಾರಿ ನಡೆದಿತ್ತು. ಈಗಾಗಲೇ ನೆಲಮಾಳಿಗೆ, ಮೊದಲ ಹಾಗೂ ಎರಡನೇ ಅಂತಸ್ತಿನ ಕಟ್ಟಡದ ಕಾಮಗಾರಿ ಮುಗಿದಿದ್ದು, 4ನೇ ಮಹಡಿಯ ಛಾವಣಿಗಾಗಿ ಸಾರ್ವೇ ಮರಗಳನ್ನು ಕಟ್ಟಲಾಗಿತ್ತು.

ಇಂದು ಮಧ್ಯಾಹ್ನ 4.15ರ ಸಂದರ್ಭದಲ್ಲಿ ಏಕಾಏಕಿ ಕಟ್ಟಡ ಸಂಪೂರ್ಣ ನೆಲಕ್ಕೆ ಕುಸಿದು ಬಿದ್ದಿದ್ದು, ಅದರಡಿ 100ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದರು. ಕೆಲವರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಮತ್ತೆ ಕೆಲವರನ್ನು ಕಾರ್ಮಿಕರೇ ರಕ್ಷಿಸಿದ್ದಾರೆ.

ಗಾಯಗೊಂಡಿರುವವರನ್ನು ಬಸ್‍ಗಳ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಮೂರು ಅಗ್ನಿಶಾಮಕ ವಾಹನ ಹಾಗೂ ಜೆಸಿಬಿಗಳು, 10 ಆ್ಯಂಬುಲೆನ್ಸ್‍ಗಳು ಧಾವಿಸಿದ್ದು, ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ನೆಲಮಾಳಿಗೆಯಲ್ಲಿ ಕಾರುಗಳು, ದ್ವಿಚಕ್ರವಾಹನಗಳನ್ನು ನಿಲ್ಲಿಸಲಾಗಿತ್ತು. ಅವುಗಳೂ ಕೂಡ ಜಖಂಗೊಂಡಿದ್ದು, ಅವುಗಳಡಿ ಕೆಲವರು ಸಿಲುಕಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.   ಮೂಲಗಳ ಪ್ರಕಾರ ಸುಮಾರು 5 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin