8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಫಿರೋಜಾಬಾದ್, ಮಾ.19-ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕುತ್ತು ಹಿಸುಕಿ ಕೊಳೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‍ದ ಚಾಂದ್‍ಪುರ್ ಗ್ರಾಮದಲ್ಲಿ ನಡೆದಿದೆ.

ಪಕ್ಕದ ಮನೆಯವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ತಮ್ಮ ಮಗಳು ಹಿಂದಿರುಗದೇ ಇರುವ ಬಗ್ಗೆ ತಾಯಿ ಆತಂಕಗೊಂಡಿದ್ದರು. ಇದೇ ವೇಳೆ ಗ್ರಾಮಸ್ಥರಿಗೆ ನಿನ್ನೆ ಬೆಳಗ್ಗೆ ಆಕೆಯ ಮನೆಯಿಂದ 200 ಮೀಟರ್ ದೂರದಲ್ಲಿ ಬಾಲಕಿಯ ಶವ ಪತ್ತೆಯಾಯಿತು.

33 ವರ್ಷದ ಬಂಟು ಸಿಂಗ್ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದು ಪರಾರಿಯಾಗಿದ್ದಾನೆ ಎಂದು ಸಿರ್ಸಾಗಂಜ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ಧಾರೆ.

ಗ್ಯಾಂಗ್‍ರೇಪ್, ಐವರ ಸೆರೆ :  ಉತ್ತರ ಪ್ರದೇಶದ ಮುಜಫರ್‍ನಗರದಲ್ಲಿ 17 ವರ್ಷದ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಎಲ್ಲ ಐದು ಆರೋಪಿಗಳನ್ನು ಬಂಧಿಸಲಾಗಿದೆ.  ಹೊಲದಿಂದ ಹಸುಗಳಿಗೆ ಮೇವು ತರಲು ಹೋಗಿದ್ದ ಈಕೆಯ ಮೇಲೆ ಐವರು ಯುವಕರು ಗ್ಯಾಂಗ್‍ರೇಪ್ ನಡೆಸಿ ಕೃತ್ಯವನ್ನು ಮೊಬೈಲ್ ಪೊೀನ್‍ಗಳಲ್ಲಿ ಸೆರೆಹಿಡಿದಿದ್ದರು. ಈ ವಿಷಯವನ್ನು ಯಾರಿಗಾದರು ತಿಳಿಸಿದರೆ ದೃಶ್ಯವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )