‘ವಾಸ್ತು‌-ನಿಂಬೆಹಣ್ಣು ನಮಗೆ ಗೊತ್ತಿಲ್ಲಾ ಸರ್’

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ರೇವಣ್ಣ : ಏನ್ ಸರ್ ಮನೆ ನವೀಕರಣ‌ಮಾಡಿದ್ದೀರ ..?
ಶಿವರಾಂ: ಆಗೇನಿಲ್ಲ; ವಾಸ್ತು‌ಗೀಸ್ತು ಏನಿಲ್ಲಾ ..ನಿಂಬೇಹಣ್ಣು ನಾವು‌ ನಂಬಲ್ಲಾ ,

ಹೀಗೊಂದು ರಾಜಕೀಯದ ನಡುವೆ ಮಾತಿನ‌ ಹಾಸ್ಯ ಚಟಾಕಿ ‌ನಡೆದದ್ದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್ ಮಾಜಿ ಸಚಿವ ಬಿ.ಶಿವರಾಂ ನಡುವೆ.

ಇಂದು ಬೆಳಿಗ್ಗೆ ಬಿ.ಶಿವರಾಂ ‌ಮನೆಗೆ ಭೇಟಿ ನೀಡಿದ್ದ ರೇವಣ್ಣ ಮುಂದಿನ ಲೋಕಸಭಾ ಚುನಾವಣೆಗೆ ತಮ್ಮ ಮಗ ಪ್ರಜ್ವಲ್ ಅವರನ್ನು ಬೆಂಬಲಿಸಲು ಮನವಿ‌ ಮಾಡುವ ಮುನ್ನ ಮೇಲಿನ ರೀತಿಯಲ್ಲಿ ಮಾತಿನ‌‌ ಚಟಾಕಿ ಹೊರಬಂದಿದೆ.

ಜೋತಿಷ್ಯ -ವಾಸ್ತು ಹೆಚ್ಚಾಗಿ ನಂಬುವ ರೇವಣ್ಣ ಅವರಿಗೆ ಶಿವರಾಂ ಮಾತಿನ ಚಟಾಕಿ‌ ಹಾರಿಸಿದರು ಇದಕ್ಕೆ ನಗುವಿನಿಂದ ಉತ್ತರಿಸಿದ ರೇವಣ್ಣ‌ ಬೇರೆ ಮಾತನಾಡದೆ ರಾಜಕೀಯ ಮಾತಿಗಿಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin