ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ನಾಯಕತ್ವ ಸಮರ್ಥ : ಅಜಿತ್

ಈ ಸುದ್ದಿಯನ್ನು ಶೇರ್ ಮಾಡಿ

ಗುರ್‍ಗಾಂವ್, ಮಾ.19- ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತದ ನಾಯಕತ್ವ ಸರ್ವ ಸಮರ್ಥ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹೇಳಿದರು.

ಕೇಂದ್ರ ಮೀಸಲು ಪೊಲೀಸ್ ಪಡೆಯ 80ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಜಿತ್ ದೋವೆಲ್ ಸಿಆರ್‍ಪಿಎಫ್ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿಯವರ ನಾಯಕತ್ವ ಉಗ್ರರ ನಿಗ್ರಹಕ್ಕೆ ಸಮರ್ಥವಾಗಿದೆ ಎಂದು ಹೇಳಿದರು.

ಪುಲ್ವಾಮ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಉಗ್ರಗಾಮಿಗಳ ಹೀನಕೃತ್ಯವನ್ನು ಭಾರತ ಮರೆತಿಲ್ಲ ಹಾಗೂ ಎಂದಿಗೂ ಮರೆಯೋದಿಲ್ಲ ಎಂದು ಅಜಿತ್ ನುಡಿದರು.

ಹಿಂದೆ ನಡೆದಿರುವ ದುರಂತಗಳನ್ನು ಹಿಂದಿರುಗಿ ನೋಡಿ ಭೀತಿ ಪಡಬೇಡಿ. ನಿಮ್ಮ ನೈತಿಕತೆ ಹೆಚ್ಚಿದಲ್ಲಿ ನಮ್ಮ ದೇಶದ ಭವಿಷ್ಯ ಸುರಕ್ಷಿತ ಎಂದು ಹೇಳುವುದರ ಮೂಲಕ ಸಿಆರ್‍ಪಿಎಫ್ ಯೋಧರಿಗೆ ನೈತಿಕ ಸ್ಥೈರ್ಯ ತುಂಬಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )