ಸುಮಲತಾ ಅವರಿಗೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ ಕಿಚ್ಚ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.19- ಮಂಡ್ಯ ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ ಎಂದು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಟ್ವೀಟ್ ಮೂಲಕ ನಟ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ.

‘ಅಂಬಿ ಮಾಮ ಎಲ್ಲಿದ್ದರೂ ಅವರ ಶಕ್ತಿ, ಬೆಂಬಲ ನೀವು ಸೇವೆ ಮಾಡಲಿಚ್ಛಿಸಿರುವ ಜನರ ಮೂಲಕವೇ ನಿಮಗೆ ಸಿಗಲಿದೆ’ ಎಂದು ಸುದೀಪ್ ಟ್ವೀಟ್ನಲ್ಲಿ ಬರೆದಿದ್ದಾರೆ.

ಜನ ನಿಮ್ಮನ್ನು ಬೆಂಬಲಿಸಲಿದ್ದಾರೆ. ಮಂಡ್ಯ ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ ಎಂದು ಹಾರೈಸಿದ್ದಾರೆ.

ಇದಕ್ಕೆ ಟ್ವೀಟ್‍ನಲ್ಲೇ ಪ್ರತಿಕ್ರಿಯಿಸಿರುವ ಸುಮಲತಾ 10 ವರ್ಷದಿಂದ ನಮ್ಮ ಮನೆಯ ಸದಸ್ಯರು ನೀವು. ನಿಮ್ಮ ಹಾರೈಕೆಯಿಂದ ಮುಂದಿನ ಸವಾಲನ್ನು ಎದುರಿಸುವ ಧೈರ್ಯ ತಂದಿದೆ ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್ ಅಕ್ಕನಂತೆ ಭಾವಿಸುವ ಸುಮಲತಾ ಅವರಿಗೆ ಶುಭ ಕೋರುವ ಮೂಲಕ ತಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಿದ್ದಾರೆ. ಈಗ ಇಡೀ ಚಿತ್ರರಂಗವೇ ಸುಮಲತಾ ಅವರ ಹಿಂದೆ ಇದ್ದು, ಈ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಅಗತ್ಯ ನೆರವನ್ನು ನೀಡಲು ಸಜ್ಜಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )