ನವಜಾತ ಶಿಶುವನ್ನು ರಕ್ಷಿಸಿದ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಮಾ.22- ತಾಲೂಕಿನ ಕೊಳಗಟ್ಟ ಗ್ರಾಮದ ಹೆದ್ದಾರಿ ಬದಿಯಲ್ಲಿ ಬಿಸಾಡಿದ್ದ ನವಜಾತ ಶಿಶುವನ್ನು ರಕ್ಷಿಸಿದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಿಸಿ, ತಾಯ್ತನ ಮೆರೆದಿದ್ದಾರೆ.

ಕೊಳಗಟ್ಟ ಗ್ರಾಮದ ಶಿವಮ್ಮ ಎಂಬುವವರು ನಿನ್ನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಹಸುಳೆ ಅಳುತ್ತಿರುವುದನ್ನು ಕಂಡು ಹೋಗಿ ನೋಡಿದಾಗ ಬಟ್ಟೆಯಲ್ಲಿ ಸುತ್ತಿ ಬಿಸಾಡಿದ್ದ ಆಗತಾನೆ ಜನಿಸಿದ್ದ ನವಜಾತ ಶಿಶು ಪತ್ತೆಯಾಗಿದೆ. ತಕ್ಷಣ ಮಗುವನ್ನು ಗ್ರಾಮಕ್ಕೆ ತಂದು ಮಂಜುನಾಥ್ ಎಂಬುವವರ ಪತ್ನಿ ಗೌರಮ್ಮ ಅವರಿಗೆ ಹೇಳಿದ್ದಾರೆ. ಆಕೆ ಮಗುವನ್ನು ಸಂತೈಸಿದರು.

ನಂತರ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಮೈಸೂರಿನ ಕೆಆರ್ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ.

ಈ ನಡುವೆ ತಮಗೆ ಹೆಣ್ಣುಮಕ್ಕಳಿಲ್ಲದ್ದರಿಂದ ಕೊಳಗಟ್ಟದ ಗೌರಮ್ಮ ತಾವೇ ಸಾಕುವ ಅಭಿಲಾಷೆ ವ್ಯಕ್ತಪಡಿಸಿದ್ದು, ಕಾನೂನು ಪ್ರಕಾರ ನಡೆದುಕೊಳ್ಳಬೇಕಿರುವುದರಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಡಿಪಿಒ ನವೀನ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )