ವಿಷ ಸೇವಿಸಿದ್ದ ತಾಯಿ ಮತ್ತು ಮಗ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮಾ.22- ವ್ಯಾಪಾರದಲ್ಲಿ ನಷ್ಟ ಹಾಗೂ ಮಾನಸಿ ನೆಮ್ಮದಿ ಇಲ್ಲದೆ ಬೇಸರಗೊಂಡು ವಿಷ ಸೇವಿಸಿದ್ದ ತಾಯಿ ಮತ್ತು ಮಗ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.  ಬೆಂಗಳೂರಿನ ಅರಿಶಿನಕುಂಟೆ ವಾಸಿಗಳಾದ ವಿಮಲಮ್ಮ(73) ಅವರ ನಾಗರಾಜ(39)ಮೃತರು ವ್ಯಾಪಾರ ನಡೆಸುತ್ತಿದ್ದ ಇವರಿಗೆ ಲಾಭ ಗಳಿಸಲು ಸಾಧ್ಯವಾಗಿರಲಿಲ್ಲ.

ಹಣಕಾಸಿನ ಮುಗ್ಗಟ್ಟಿನಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು ವಿಮಲಮ್ಮ ಸ್ನೇಹಿತೆ ವಿದ್ಯಾರಣ್ಯಪುರ ವಾಸಿ ಕಮಲಮ್ಮ ಮೂವರು ಸೇರಿ ವಿಷ ಸೇವಿಸಿ ಸಾವನ್ನಪ್ಪಲು ನಿರ್ಧರಿಸಿದ್ದರು.

ಬೆಂಗಳೂರಿನಿಂದ ಮಾ. 14ರಂದು ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಜಿಲ್ಲೆಯ ಹೊರನಾಡು ಹಾಗೂ ಶೃಂಗೇರಿಗೆ ಬಂದು ಅಲ್ಲೇ ವಾಸ್ತವ್ಯ ಹೂಡಿದ್ದರು. ಮಾರ್ಚ್. 18ರಂದು ಕುರುಬಕೇರಿ ರಸ್ತೆಯಲ್ಲಿರುವ ರಕ್ತೇಶ್ವರಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ದರ್ಶನ ಮಾಡಿ ಪತ್ರ ಬರೆದು ತಮ್ಮಲ್ಲಿದ್ದ ಹಣ ಮತ್ತು ಪತ್ರ ಇಟ್ಟು ತುಂಗಾ ನದಿ ಬಳಿ ಬಂದು ತಂದಿದ್ದ ವಿಷವನ್ನು ನೀರಿಗೆ ಬೆರೆಸಿ ಮೂವರು ಕುಡಿಯಲು ಮುಂದಾದರು

ಕಮಲಮ್ಮನಿಗೆ ಹೆದರಿಕೆಯಾಗಿ ವಿಷ ಕುಡಿಯುವುದು ಬೇಡ ಎಂದು ಹೇಳುವಷ್ಟರಲ್ಲಿ ವಿಮಲಮ್ಮ ಮತ್ತು ಮಗ ನಾಗರಾಜ ವಿಷ ಕುಡಿದು ಒದ್ದಾಡಲಾರಂಭಿಸಿದ್ದರು. ತಕ್ಷಣ ಕಮಲಮ್ಮ ಪರಿಚಯಸ್ಥರಿಗೆ ವಿಷಯ ತಿಳಿಸಿ ಇಬ್ಬರನ್ನು ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ವಿಮಲಮ್ಮನನ್ನು ಬೆಂಗಳೂರಿಗೂ ನಾಗರಾಜನನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೂ ದಾಖಲಿಸಲಾಯಿತು.

ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ವಿಮಲಮ್ಮ ಸಾವನ್ನಪ್ಪಿದರೆ ನಿನ್ನೆ ನಾಗರಾಜ ಮಂಗಳೂರಿನಲ್ಲಿ ಮೃತರಾಗಿದ್ದಾರೆ. ಶೃಂಗೇರಿ ಪೊಲೀಸರು ಪ್ರಕರಣ ದಾಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )