60 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದ 18 ತಿಂಗಳ ಮಗು ರಕ್ಷಣೆಗಾಗಿ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಹರಿಯಾಣ,ಮಾ.22- ಮನೆ ಬಳಿ ಆಟವಾಡುತ್ತಿದ್ದ 18 ತಿಂಗಳ ಮಗು ಆಕಸ್ಮಿಕವಾಗಿ ಸುಮಾರು 60 ಅಡಿ ಆಳವಿರುವ ಬೋರ್ ವೆಲ್ಗೆ ಬಿದ್ದಿದ್ದು, ಮಗುವಿನ ರಕ್ಷಣೆಗಾಗಿ ತಡರಾತ್ರಿಯಿಂದಲೇ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಒಂದೂವರೆ ವರ್ಷದ ಮಗುವಿಗಾಗಿ ಎನ್‍ಡಿಆರ್‍ಎಫ್ ತಂಡ, ಸೈನಿಕರ ವಿಶೇಷ ತಂಡ ಹಾಗೂ ಸ್ಥಳೀಯ ಪೊಲೀಸರ ನಿರಂತರ ರಕ್ಷಣೆ ಕಾರ್ಯ ಮುಂದುವರೆದಿದೆ.

ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿಗಳು ಇಂದು ಮಗುವಿನ ಸಮೀಪ ತಲುಪಿದ್ದು, ಬೋರ್‍ವೆಲ್ ಒಳಗಡೆ ಬಿಟ್ಟಿದ್ದ ನೈಟ್-ವಿಷನ್ ಕ್ಯಾಮೆರಾದಲ್ಲಿ ಮಗುವಿನ ಚಲನವಲನಗಳು ಸೆರೆಯಾಗಿದೆ ಎಂದು ರಕ್ಷಣಾ ಸಿಬ್ಬಂದಿ ದೃಢಪಡಿಸಿದ್ದಾರೆ. ಮಗುವಿನ ರಕ್ಷಣೆಗಾಗಿ ಮತ್ತೊಂದು ಮಾರ್ಗದಲ್ಲಿ ಸುಮಾರು 20 ಅಡಿಯಷ್ಟು ಸುರಂಗ ಮಾರ್ಗ ಕೊರೆಯಲಾಗಿದೆ.

ಮಗುವಿನ ಚಲನವಲನ ದೃಢಪಟ್ಟ ಹಿನ್ನೆಲೆಯಲ್ಲಿ ಯಂತ್ರೋಪಕರಣಗ¼ % ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಮಗುವಿಗೆ ಯಾವುದೇ ಅಪಾಯವಾಗದಂತೆ ಮಣ್ಣು ಕುಸಿತದ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )