ಐಪಿಎಲ್ ಆರಂಭಿಕ ಪಂದ್ಯದಲ್ಲೇ ನಿರಾಸೆ ಮೂಡಿಸಿದ ಆರ್ಸಿಬಿ, ಚೆನ್ನೈ ಶುಭಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ.ಮಾ.23 : 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಎಂದಿನಂತೆ ಇಂದೂ ಸಹ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.  ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು , ಆರ್ಸಿಬಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಆದರೆ ಆರ್ಸಿಬಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಗಿದೆ.

ಕೊಹ್ಲಿ ಕೇವಲ 6 ರನ್ ಸಿಡಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರೆ, ಪಾರ್ಥಿವ್ ಪಟೇಲ್ ಗರಿಷ್ಟ 29 ರನ್ ಗಳಿಸಿದರು. ಕಳಪೆ ಪ್ರದರ್ಶನದಿಂದ ಆರ್ಸಿಬಿ ನಿಗದಿತ 20 ಓವರ್ ಗಳಲ್ಲಿ ಕೇವಲ 70 ರನ್ ಗಳಿಸಲಷ್ಟೇ ಶಕ್ತವಾಯಿತು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ ಸುಲಭವಾಗಿ 17.4 ನೇ ಓವರ್ ನಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 71 ರನ್ ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿತು. ಚನ್ನೈ ಪರ ರಾಯುಡು 28, ರೈನಾ 19, ಮತ್ತು ಜಾಧವ್ 19 ರನ್ ಗಳಿಸಿ ಮಿಂಚಿದರು .

ಉದ್ಘಾಟನಾ ಸಮಾರಂಭದ 11 ಕೋಟಿ ರೂಪಾಯಿ ಭಾರತೀಯ ಸೇನೆಗೆ :  12ನೇ ಆವೃತ್ತಿ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡಿರುವ ಬಿಸಿಸಿಐ ಈ ಹಣವನ್ನು ಭಾರತೀಯ ಸೇನೆಗೆ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಬಿಸಿಸಿಐ ಸರಿಸುಮಾರು 20 ಕೋಟಿ ರೂಪಾಯಿ ಮೊತ್ತವನ್ನು ಇದೀಗ ಭಾರತೀಯ ಸೇನೆಗೆ ನೀಡಲಿದೆ.

ಉದ್ಘಾಟನಾ ಸಮಾರಂಭ ಆಯೋಜನೆಯ 20 ಕೋಟಿ ರೂಪಾಯಿ ಹಣದಲ್ಲಿ 11 ಕೋಟಿ ರೂಪಾಯಿ ಭಾರತೀಯ ಸೇನೆಗೆ, ಇನ್ನು 7 ಕೋಟಿ ರೂಪಾಯಿ ಅಖPಈ ಹಾಗು ತಲಾ 1 ಕೋಟಿ ಭಾರತೀಯ ವಾಯು ಸೇನೆ ಭಾರತೀಯ ನೌಕಾಪಡೆಗೆ ಹಂಚಲಿದೆ.

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಭಾರತೀಯ ಅಖPಈ ಯೋಧರ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಅಖPಈ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬಳಿಕ ಬಿಸಿಸಿಐ, ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡಲು ನಿರ್ಧರಿಸಿತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin