ಧಾರ್ಮಿಕ ಕಾರ್ಯದ ಸೋಗಿನಲ್ಲಿ ಉಗ್ರರ ಸಂಘಟನೆಗೆ ಹಫೀಜ್ ಪಿತೂರಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.23- ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಾಗೂ ಕುಖ್ಯಾತ ಉಗ್ರಗಾಮಿ ಹಫೀಜ್ ಸೈಯದ್ ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಉಗ್ರಗಾಮಿಗಳನ್ನು ಸಂಘಟಿಸುವ ಕಾರ್ಯದಲ್ಲಿ ನಿರತನಾಗಿದ್ದಾನೆ ಎಂಬ ಆತಂಕಕಾರಿ ಸಂಗತಿಯೊಂದು ಬಹಿರಂಗವಾಗಿದೆ.

ಧಾರ್ಮಿಕ ಕಾರ್ಯಗಳ ಸೋಗಿನಲ್ಲಿ ಹಫೀಜ್ ಭಾರತದ ವಿವಿಧೆಡೆ ಉಗ್ರಗಾಮಿಗಳ ಸಂಘಟನೆಯನ್ನು ಬಲಗೊಳಿಸಲು ವ್ಯವಸ್ಥಿತ ಪಿತೂರಿ ನಡೆಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತಿಳಿಸಿದೆ.

ಈ ಸಂಬಂಧ ಹಫೀಜ್ ನೇತೃತ್ವದ ಫಲ್ಹಾ-ಎ-ಇನ್ಸಾನಿಯತ್ ಫೌಂಡೇಷನ್(ಎಫ್‍ಐಎಫ್)ಸಂಘಟನೆ ವಿರುದ್ಧ ಎನ್‍ಐಎ ಆರೋಪಪಟ್ಟಿ ದಾಖಲಿಸಿದೆ. ಈ ಪ್ರಕರಣ ಸಂಬಂಧ ಮಹ್ಮದ್ ಸಲ್ಮಾನ್, ಮಹ್ಮದ್ ಸಲೀಂ ಅಲಿಯಾಸ್ ಮನ್ನಾ ಹಾಗೂ ಮಹ್ಮದ್ ಕಮರಾಮ್ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ದೆಹಲಿ, ಹರಿಯಾಣ್ ಸೇರಿದಂತೆ ಕಳೆದ 7ವರ್ಷಗಳಿಂದ ಹಫೀಜ್ ಧಾರ್ಮಿಕ ಸೋಗಿನಲ್ಲಿ ಸ್ಪೀಪರ್ ಸೆಲ್‍ಗಳು(ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗುವುದಕ್ಕೆ ಮುನ್ನ ಉಗ್ರರನ್ನು ಧಾರ್ಮಿಕ ಸ್ಥಳದ ಶಯನ ಕೊಠಡಿಗಳಲ್ಲಿ ಇರಿಸುವಿಕೆ) ಹಾಗೂ ಕ್ಲಿಷ್ಟಕರ ಕಾರ್ಯಗಳನ್ನು (ವಿಧ್ವಂಸಕ ಕೃತ್ಯಗಳನ್ನು) ನಿರ್ವಹಿಸಲು ವ್ಯವಸ್ಥಿತ ತಂತ್ರ ರೂಪಿಸುವ ಒಳಸಂಚು ಮತ್ತು ಪಿತೂರಿಯಲ್ಲಿ ತೊಡಗಿದ್ದಾನೆ ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಆತನ ಎಫ್‍ಐಎಫ್ ಸಂಘಟನೆ ಮತ್ತು ಅದರ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಅವರ ಜಾಲವನ್ನು ಮಟ್ಟಹಾಕಲು ಕಾರ್ಯೋನ್ಮುಖರಾಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )