ಸಿರಿಯಾ ಐಎಸ್ ಉಗ್ರರಿಂದ ಸಂಪೂರ್ಣ ಮುಕ್ತ : ಅಮೇರಿಕಾ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬಾಘೌಝ್, ಮಾ.23-ಹಿಂಸಾಚಾರದಿಂದ ನಲುಗಿದ್ದ ಸಿರಿಯಾವನ್ನು ಸಂಪೂರ್ಣವಾಗಿ ಇಸ್ಲಾಮಿಕ್ ಸ್ಟೇಟ್(ಐಎಸ್)ಉಗ್ರರಿಂದ ಮುಕ್ತಗೊಳಿಸಲಾಗಿದೆ ಎಂದು ಅಮೆರಿಕಾ ಬೆಂಬಲಿತ ಸಿರಿಯಾ ಸೇನಾ ಪಡೆಗಳು ಇಂದು ಅಧಿಕೃತವಾಗಿ ಘೋಷಿಸಿವೆ.

ವಿಶ್ವದ ಅತ್ಯಂತ ಕ್ರೂರ ಮತ್ತು ನಿರ್ದಯ ಉಗ್ರಗಾಮಿ ಸಂಘಟನೆಯಾದ ಐಎಸ್ ಬಂಡುಕೋರರನ್ನು ಬಾಘೌಝ್ ಗ್ರಾಮದಿಂದ ಹೊಡೆದಟ್ಟಲಾಗಿದ್ದು, ಸಿರಿಯಾ ಈಗ ಸಂಪೂರ್ಣ ಉಗ್ರರಿಂದ ಮುಕ್ತವಾಗಿದೆ ಎಂದು ಸೇನಾ ಪಡೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರರ ವಶದಲ್ಲಿ ಕಟ್ಟಕಡೆಯ ಸ್ಥಳವಾದ ಬಾಘೌಝ್‍ನಿಂದ ಎಲ್ಲಾ ಉಗ್ರಗಾಮಿಗಳನ್ನು ಓಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅನೇಕ ಬಂಡುಕೋರರು ಹತರಾಗಿದ್ದಾರೆ ಎಂದು ಕುರ್ಡಿಷ್ ನೇತೃತ್ವದ ಸಿರಿಯಾ ಡೆಮಾಕ್ರಾಟಿಕ್ ಪೋರ್ಸ್ ವಕ್ತಾರ ಮುಸ್ತಾಫ್ ಬಾಲಿ ಟ್ವಿಟ್‍ನಲ್ಲಿ ತಿಳಿಸಿದ್ದಾರೆ.

ಇರಾಕ್ ಮತ್ತು ಸಿರಿಯಾದಲ್ಲಿ ಐಎಸ್ ಉಗ್ರರ ಉಪಟಳವನ್ನು ಬಹುತೇಕ ನಿಗ್ರಹಿಸಲಾಗಿದೆ. ಇದು ಸೇನೆ ಸಿಕ್ಕ ಜಯ ಎಂದು ಮೈತ್ರಿ ಸೇನಾ ಪಡೆಗಳ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )