54 ವಿಮಾನಗಳ ಸಂಚಾರ ಸೇವೆ ಸ್ಥಗಿತಗೊಳಿಸಿದ ಜೆಟ್‍ ಏರ್‍ವೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.23- ಅತಂತ್ರ ಸ್ಥಿತಿಗೆ ಸಿಲುಕಿರುವ ಜೆಟ್‍ಏರ್ ವೇಸ್ ವಿಮಾನಯಾನ ಸಂಸ್ಥೆಯೂ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸಿದ್ದು, 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಸ್ಥೆಯ ಸೇವೆ ಸ್ಥಗಿತವಾಗಿದೆ, ಇದರೊಂದಿಗೆ ಸ್ಥಗಿತಗೊಂಡ ವಿಮಾನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.

ಮೂಲಗಳ ಪ್ರಕಾರ ಏಪ್ರಿಲ್ ಅಂತ್ಯದವರೆಗೂ ಪುಣೆ-ಅಬುದಾಬಿ, ಪುಣೆ-ಸಿಂಗಪುರ್, ಮುಂಬೈ-ಮ್ಯಾಂಚೆಸ್ಟರ್ ಸೇರಿದಂತೆ ಒಟ್ಟು 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಜೆಟ್‍ಏರ್ ವೇಸ್ ವಿಮಾನಗಳ ಹಾರಾಟ ಬಂದ್ ಆಗಿದೆ.

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಜೆಟ್‍ಏರ್ ವೇಸ್‍ವಿಮಾನಗಳ ಬಾಡಿಗೆ ಭರಿಸಲಾಗದೇ ಮತ್ತೆ 7 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ್ದು, ಇದರೊಂದಿಗೆ ಸ್ಥಗಿತಗೊಂಡ ವಿಮಾನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.

ಷೇರು ಮಾರುಕಟ್ಟೆಗೆ ಮಾಹಿತಿ: ಈ ಬಗ್ಗೆ ಷೇರುಮಾರುಕಟ್ಟೆ ಕಚೇರಿಗೆ ಸ್ವತಃ ಜೆಟ್‍ಏರ್ ವೇಸ್ ಮಾಹಿತಿ ನೀಡಿದ್ದು, ಬಾಡಿಗೆ ಹಣ ಭರಿಸಲಾಗದೇ ತಾನು ಮತ್ತೆ 7 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದೆ.

ಸಂಸ್ಥೆಯ ಮೂಲಗಳು ತಿಳಿಸಿರುವಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳೂ ಸೇರಿದಂತೆ ನಿತ್ಯ 600 ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವಿಮಾನಗಳು ಇದೀಗ ಕೇವಲ 119 ಮಾರ್ಗಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.

ತಾಂತ್ರಿಕ ದೋಷದಿಂದ ಪದೇ ಪದೇ ವಿಮಾನ ಹಾರಾಟ ಸೇವೆಯನ್ನು ರದ್ದುಗೊಳಿಸುತ್ತಿದ್ದ ಜೆಟ್ ಏರ್‍ವೇಸ್ ತನ್ನ ಸಿಬ್ಬಂದಿಗಳಿಗೆ 3ತಿಂಗಳ ವೇತನ ಪಾವತಿಸದೆ ವಿವಾದಕ್ಕೆ ಗುರಿಯಾಗಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin