ಪಾಕ್ ರಾಷ್ಟ್ರೀಯ ದಿನಾಚರಣೆಗೆ ಮೋದಿ ವಿಷ್, ಇಮ್ರಾನ್ ಖುಷ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್/ನವದೆಹಲಿ, ಮಾ.23- ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಈ ಶಿಷ್ಟಾಚಾರಕ್ಕೆ ಮೆಚ್ಚುಗೆ ಸೂಚಿಸಿ ಸ್ವಾಗತಿಸಿರುವ ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಉಭಯ ದೇಶಗಳ ನಡುವೆ ಸಮಗ್ರ ಶಾಂತಿ ಮಾತುಕತೆಗೆ ಕಾಲಸನ್ನಿಹಿತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪಾಕಿಸ್ತಾನದ ತಮ್ಮ ಸಹವರ್ತಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದು ದೇಶದ ಶುಭಾಶಗಳನ್ನು ಕೋರಿದ್ದಾರೆ.

ಅಲ್ಲದೆ ಭಯೋತ್ಪಾದನೆ ಮುಕ್ತ ದಕ್ಷಿಣ ಏಷಿಯಾದ ಪ್ರಾಮುಖ್ಯತೆ ಬಗ್ಗೆ ಮೋದಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಪ್ರಜಾಸತ್ತಾತ್ಮಕ, ಪ್ರಗತಿಪರ ಮತ್ತು ಸಮೃದ್ಧ ಏಷಿಯಾ ಪ್ರಾಂತ್ಯಕ್ಕಾಗಿ ಉಪಖಂಡದ ಜನರೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ದಕ್ಷಿಣ ಏಷಿಯಾದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಮೋದಿ, ಇಮ್ರಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮೋದಿ ಅವರ ಸಂದೇಶವನ್ನು ಸ್ವಾಗತಿಸಿ ಪ್ರಶಂಶಿಸಿರುವ ಪಾಕ್ ಪ್ರಧಾನಿ ಕಾಶ್ಮೀರ ವಿವಾದ ಸೇರಿದಂತೆ ಉಭಯದೇಶಗಳ ನಡುವೆ ಇರುವ ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತ ಮತ್ತು ಪಾಕ್ ನಡುವೆ ಸಮಗ್ರ ಮಾತುಕತೆಗೆ ಕಾಲ ಸನ್ನಿಹಿತವಾಗಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಖಾನ್ ನಮ್ಮ ದೇಶದ ಜನರಿಗೆ ಮೋದಿಯವರು ನೀಡಿರುವ ಸಂದೇಶ ಸ್ವಾಗರ್ತಾಹ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲೇ ಮೋದಿಯವರ ಈ ಸಂದೇಶ ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ.

ಏಷಿಯಾ ಖಂಡ ಎಲ್ಲ ಜನರ ಶಾಂತಿ-ಸೌಹಾರ್ದಯುತೆಗಾಗಿ ಆಧಾರಿತ ಸದೃಢ ಹೊಸ ಸಂಬಂಧಕ್ಕಾಗಿ ಇದು ಪೂರಕವಾಗಿದೆ ಎಂದು ಬಣ್ಣಿಸಿದ್ದಾರೆ. ರಾಜಧಾನಿ ದೆಹಲಿಯ ಪಾಕ್ ರಾಯಭಾರಿ ಕಚೇರಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯನ್ನು ಬಹಿಷ್ಕರಿಸಲು ಭಾರತ ನಿನ್ನೆ ನಿರ್ಧರಿಸಿತ್ತು.

ಈ ಸಮಾರಂಭಕ್ಕೆ ಜಮ್ಮು ಮತ್ತು ಕಾಶ್ಮೀರದ ಹುರಿಯತ್ ಪ್ರತ್ಯೇಕತಾವಾದಿ ಸಂಘಟನೆಗಳ ನಾಯಕರನ್ನು ಪಾಕಿಸ್ತಾನ ಆಹ್ವಾನಿಸಿರುವುದೇ ಭಾರತದ ಬಹಿಷ್ಕಾರಕ್ಕೆ ಕಾರಣ. ಪ್ರತಿ ವರ್ಷ ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ದಿನಾಚರಣೆಯಲ್ಲಿ ಕೇಂದ್ರ ಸಚಿವರ ಮಟ್ಟದ ಅತಿಥಿಯೊಬ್ಬರು ಭಾಗವಹಿಸುತ್ತಿದ್ದರು.

ಆದರೆ, ಪುಲ್ವಾಮಾ ಉಗ್ರರ ದಾಳಿ ಮತ್ತು ಈ ಕಾರ್ಯಕ್ರಮಕ್ಕೆ ಕಾಶ್ಮೀರದ ಪ್ರತ್ಯಕತಾವಾದಿ ನಾಯಕರಿಗೆ ಆಮಂತ್ರಣ ನೀಡಿರುವುದರಿಂದ ಇಂದು ನಡೆಯುತ್ತಿರುವ ಈ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin