ಉತ್ತರ ಕೊರಿಯಾ ಮೇಲಿನ ದಿಗ್ಬಂಧನ ಹಿಂಪಡೆದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್‍ಟನ್, ಮಾ.23- ಸರಣಿ ಅಣ್ವಸ್ತ್ರ ಪರೀಕ್ಷೆಗಳ ಮೂಲಕ ತೀವ್ರ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕಾದಿಂದ ಈಗಾಗಲೇ ಉತ್ತರ ಕೊರಿಯಾಗೆ ವಿಧಿಸಲಾಗಿರುವ ನಿರ್ಬಂಧದ ಜೊತೆಗೆ ಇತ್ತೀಚೆಗೆ ಹೆಚ್ಚುವರಿಯಾಗಿ ವಿಧಿಸಲಾಗಿದ್ದ ನಿರ್ಬಂಧದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂಬುದನ್ನು ಮಾತ್ರ ಟ್ರಂಪ್ ಇನ್ನೂ ಸ್ಪಷ್ಟಪಡಿಸಿಲ್ಲ.

ಇದಕ್ಕೂ ಮುನ್ನ ಚೀನಾ ವಿರುದ್ಧ ಉತ್ತರ ಕೊರಿಯಾ ನಿರ್ಬಂಧವನ್ನು ಉಲ್ಲಂಘನೆ ಮಾಡಿರುವ ಆರೋಪ ಮಾಡಿದ್ದ ಅಮೆರಿಕ, ಚೀನಾ ಮೂಲದ ಎರಡು ನೌಕಾಸಂಸ್ಥೆಗಳನ್ನು (ಶಿಪ್ಪಿಂಗ್) ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿತ್ತು.

ಅಮೆರಿಕ ಅಧ್ಯಕ್ಷರು ಉತ್ತರ ಕೊರಿಯಾ ವಿರುದ್ಧ ಇತ್ತೀಚೆಗಷ್ಟೇ ವಿಧಿಸಲಾಗಿದ್ದ ಹೆಚ್ಚುವರಿ ನಿರ್ಬಂಧಗಳನ್ನು ರದ್ದುಗೊಳಿಸಲಾಗಿದೆ ಎಂದಷ್ಟೇ ಸ್ಪಷ್ಟಪಡಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin