ಕಾಂಗ್ರೆಸ್ 8ನೇ ಪಟ್ಟಿ ಬಿಡುಗಡೆ, 38 ಅಭ್ಯರ್ಥಿಗಳಿಗೆ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮಾ.24- ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ 17ನೇ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 8ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಘಟಾನುಘಟಿಗಳು ಸೇರಿದಂತೆ 38 ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಗುಲ್ಬರ್ಗ(ಕಲಬುರಗಿ) ಲೋಕಸಭಾ ಕ್ಷೇತ್ರದಿಂದ ಮತ್ತೆ ಟಿಕೆಟ್ ಪಡೆದಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ವಾಹ್ ಅವರನ್ನು ನಾಂದೇಡ್‍ನಿಂದ ಕಣಕ್ಕಿಳಿಸಲಿದೆ.

ನಿನ್ನೆ ತಡರಾತ್ರಿ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಮಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‍ಸಿಂಗ್ ಅವರನ್ನು ಬೋಪಾಲ್ ಲೋಕಸಭಾ ಕ್ಷೇತ್ರದಿಂದ ಹಾಗೂ ಉತ್ತರಖಂಡ್‍ನ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ನೈನಿತಾಲ್ ಕ್ಷೇತ್ರದಿಂದ ಸ್ಪರ್ಧಿಗಿಳಿಸಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರ ಪುತ್ರ ಮನೀಶ್ ಖಂಡೂರಿ ಅವರು ಘರವಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪಕ್ಷದ ಅಭ್ಯರ್ಥಿಗಳಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಾಸಭಾ ಕ್ಷೇತ್ರಗಳಿಂದ ಮಾಜಿ ಸಚಿವರಾದ ಎಂ.ವೀರಪ್ಪ ಮೊಯ್ಲಿ ಮತ್ತು ಕೆ.ಎಂ.ಮುನಿಯಪ್ಪ ಅವರಿಗೆ ಅನುಕ್ರಮವಾಗಿ ಟಿಕೆಟ್ ನೀಡಲಾಗಿದೆ.

ಎಂಟನೆಯ ಪಟ್ಟಿಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ್, ಉತ್ತರ ಪ್ರದೇಶ, ಮಣಿಪುರ ಮತ್ತು ಮಹಾರಾಷ್ಟ್ರ ರಾಜ್ಯಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ರಾಹುಲ್ ಗಾಂಧಿಯವರ ಸಮೀಪವರ್ತಿಯಾದ ಮೀನಾಕ್ಷಿ ನಟರಾಜನ್ ಅವರಿಗೆ ಮಧ್ಯಪ್ರದೇಶದ ಮಂದೌರ್ ಕ್ಷೇತ್ರದಿಂದ ಹಾಗೂ ಪಕ್ಷದ ಮಾಜಿ ವಕ್ತಾರ ರಶೀದ್ ಅಲ್ವಿ ಅವರನ್ನು ಉತ್ತರಪ್ರದೇಶದ ಅಂರೋಹ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

543 ಸದಸ್ಯರುಳ್ಳ ಲೋಕಸಭೆ ಚುನಾವಣೆಗೆ 218 ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್ ಘೋಷಿಸಿದೆ. ಏಪ್ರಿಲ್ 11 ರಂದು ಏಳು ಹಂತಗಳಲ್ಲಿ ನಡೆಯಲಿದೆ ಮತ್ತು ಮೇ 19 ರಂದು ಕೊನೆಗೊಳ್ಳಲಿದೆ. ಎಣಿಕೆಯು ಮೇ 23 ರಂದು ನಡೆಯುತ್ತದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin