ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಳೆ‌ ಎ.ಮಂಜು ನಾಮಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಮಾ. 24 : ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಸೋಮವಾರ ಮಾರ್ಚ್ 25 ರಂದು ನಾಮ ಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಎ.ಮಂಜು ನಾಮಪತ್ರ ಸಲ್ಲಿಸುತ್ತಿದ್ದು.

ಈ ಸಂಧರ್ಭದಲ್ಲಿ ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ .ಬಿ.ಎಸ್. ಯಡ್ಡಿಯೂರಪ್ಪ ಹಾಗೂ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಆಗಮಿಸುವ ನಿರೀಕ್ಷೆಯಿದೆ. ನಾಮಪತ್ರ ವೇಳೆ ಸಾವಿರಾರು‌ ಜನರ‌ ಸೇರಿಸಿ ತಮ್ಮ ಪಕ್ಷದ ಶಕ್ತಿ‌ ಪ್ರದರ್ಶನ ಮಾಡುವುದಾಗಿ ಈಗಾಗಲೇ ಕ್ಷೇತ್ರದ ‌ಶಾಸಕ‌ ಪ್ರೀತಂ ಗೌಡ ಹೇಳಿದ್ದಾರೆ.

22 ರಂದು ಜೆಡಿಎಸ್ ಪಕ್ಷದವರು ನಾಮಪತ್ರ‌ ಸಲ್ಲಿಸಿದ‌ ವೇಳೆ ಸೇರಿದ್ದ ಜನಸಂಖ್ಯೆಗಿಂತ‌ ಹೆಚ್ಚು ‌ಜನ‌ ಬೆಂಬಲ‌ ಜಿಲ್ಲಾ ಬಿಜೆಪಿ ಹಾಗೂ‌ ಪಕ್ಷದ ಪ್ರಧಾನಿ ‌ಅಭ್ಯರ್ಥಿ ನರೇಂದ್ರ ಮೋದಿಗೆ‌ ಇದೆ‌ ಅವರ ಜನಸೇವೆಗೆ ಬೆಂಬಲಿಸೆಯೇ‌‌ ಹೆಚ್ಚು‌ ಜನರು ಆಗಮಿಸಲಿದ್ದಾರೆ‌ ಎಂದು ಪ್ರೀತಂ ವಿಶ್ವಾಸ ವ್ಯಾಕ್ತಪಡಿಸಿದ್ದಾರೆ‌.

ಕುತೂಹಲ ಮೂಡಿಸಿದ ಜಿಲ್ಲಾಧ್ಯಕ್ಷರ‌ ನಡೆ: 25 ರಂದು ಎ.ಮಂಜು ನಾಮಪತ್ರ ಸಲ್ಲಿಸುತ್ತಿದ್ದಾರೆ ಆದರೆ‌ ಬಿಜೆಪಿ‌ ಹಾಸನ‌ ಜಿಲ್ಲಾಘಟಕದ‌‌ ಅಧ್ಯಕ್ಷ‌ ಯೋಗಾ ರಮೇಶ್ ಅಸಮಾಧಾನ ಗೊಂಡಿದ್ದಾರೆ ಹಾಗೂ ಮಂಜು‌ ನಾಮಪತ್ರ‌ ಸಲ್ಲಿಸುವ ವೇಳೆ ‌ಹಾಜರಿರುವರೆ ಎಂಬ ಕುತೂಹಲ ಕೆರಳಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin