ಹಿನಾಯವಾಗಿ ಸೋತರು ಸಿದ್ದರಾಮಯ್ಯ ಇನ್ನು ದುರಹಂಕಾರ ಬಿಟ್ಟಿಲ್ಲ : ಶ್ರೀನಿವಾಸ್ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಮಾ.24- ನನ್ನ ರಾಜಕೀಯ ಜೀವನದಲ್ಲಿ ಯಾರು ತಲೆ ಹಾಕಿರಲಿಲ್ಲ. ನನಗೆ ಅವಮಾನ ಮಾಡಿದವರ ಸ್ಥಿತಿ ಇಂದು ಏನಾಗಿದೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನಾ ಮುಂದಿನ 5 ವರ್ಷದ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ.

ಕುಮಾರಸ್ವಾಮಿ ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುವುದಿಲ್ಲ ಎಂದು ಮೆರೆಯುತ್ತಿದ್ದವರು ಈಗ ಏನಾದರು ? ಹಿನಾಯವಾಗಿ ಸೋತರು ಇನ್ನು ದುರಹಂಕಾರ ಬಿಡಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು. 543ಕ್ಷೇತ್ರಗಳಲ್ಲಿ 499 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇಲ್ಲ. 2014 ಕಾಂಗ್ರೆಸ್ ಹೀನಾಯವಾಗಿ ಸೋತಿದೆ. 44 ಸ್ಥಾನಗಳನ್ನ ಗೆದ್ದ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವೂ ಆಗಲಿಲ್ಲ. ಕರ್ನಾಟಕದಲ್ಲೂ ಬಿಜೆಪಿಗೆ ಹೆಚ್ಚು ಒಲವಿದೆ. ಕಳೆದ ಬಾರಿ 17 ಸ್ಥಾನ ಗೆದ್ದಿದ್ದೇವೆ.

ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆದ್ದಿದ್ದು ಕೇವಲ 9, ಜೆಡಿಎಸ್ ಕೇವಲ 2 ಸ್ಥಾನ ಗೆದ್ದಿದೆ. ಯಾರು ಈ ದೇಶವನ್ನ ಆಳಬೇಕು ಎಂಬ ಒಂದು ದೊಡ್ಡ ಚುನಾವಣೆ ಇದು. ಜನ ಬಹಳ ಕುತೂಹಲದಿಂದ ಚುನಾವಣೆಯನ್ನು ನೋಡುತಿದ್ದಾರೆ ಎಂದರು.

ರಾಜಶೇಖರಮೂರ್ತಿ ತಮ್ಮ ಗುರುಗಳು ಎಂದು ಧ್ರುವನಾರಾಯಣ್ ಹೇಳಿದ್ದಾರೆ. ರಾಜಶೇಖರಮೂರ್ತಿ ಬಗ್ಗೆ ನನಗೆ ಗೌರವವಿದೆ. ಆದರೆ ಸಂತೇಮರಳ್ಳಿ ರದ್ದಾದಾಗ ಕಾಂಗ್ರೆಸ್ ಟಿಕೇಟ್ ಸಿಗುವಂತೆ ಮಾಡಿದ್ದು ಯಾರು..? 2009ರಲ್ಲಿ ಲೋಕಸಭಾ ಟಿಕೇಟ್ ಕೊಡಿಸಿದ್ದು ಸಿದ್ಧರಾಮಯ್ಯ ಎಂದು ಧ್ರುವನಾರಾಯಣ್ ಹೇಳುತ್ತಿದ್ದಾರೆ.

ಭಾವಿಯಲ್ಲೆ ಯಾಕೆ ಈಜುತ್ತಿಯ ಸಮುದ್ರಕ್ಕೆ ಹೋಗು ಎಂದು ಸಂಸತ್‍ಗೆ ಸ್ಪರ್ಧಿಸುವಂತೆ ಸಲಹೆ ನೀಡಿದವರು ಯಾರು ಎಂದು ವ್ಯಂಗ್ಯವಾಡಿದರು. ರಾಜ್ಯ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಮಾತನಾಡಿ, 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಫುಡಾರಿಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದರು.

10 ವರ್ಷದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆಯಿತು ಎಂದು ದೂರಿದರು.  ವೇದಿಕೆಯಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ನಂಜನಗೂಡು ಶಾಸಕ ಹರ್ಷವರ್ಧನ್, ಜಿಲ್ಲಾಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಭಾರತಿ ಶಂಕುರ್ ಪರಿಮಳನಾಗಪ್ಪ, ಸಿದ್ದರಾಜು, ಗುರುಸ್ವಾಮಿ, ಎಂಡಿಸಿಸಿ ಬ್ಯಾಂಕ್‍ನ ಬಸವೇಗೌಡ, ಮಹದೇವಯ್ಯ, ಡಾ.ದತ್ತೇಶ್ ಕುಮಾರ್, ಮಾಂಬಳ್ಳಿ ನಂಜುಂಡಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin