ತಮಿಳುನಾಡಿನಲ್ಲೂ ಎಐಎಡಿಎಂಕೆ, ಡಿಎಂಕೆ ಫ್ಯಾಮಿಲಿ ಪೋಟಿಟಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಮಾ.24- ಲೋಕಸಭಾ ಚುನಾವಣೆಯಲ್ಲಿ ವಂಶಪಾರಂಪರ್ಯ ರಾಜಕಾರಣದ ಪ್ರಭಾವ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ತಮಿಳುನಾಡಿನಲ್ಲೂ ಕುಟುಂಬ ರಾಜಕೀಯ ತನ್ನ ಪ್ರಾಬಲ್ಯ ಬೀರಿದೆ.

ತಮಿಳುನಾಡಿನ ಪ್ರಬಲ ಪ್ರಾದೇಶಿಕ ಪಕ್ಷ ಡಿಎಂಕೆಯಲ್ಲಿ ಕಂಡುಬಂದಿದ್ದ ವಂಶಪಾರಂಪರ್ಯ ರಾಜಕಾರಣ ಈಗ ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲೂ ಗೋಚರಿಸಿದೆ. ಡಿಎಂಕೆಯ ವಂಶಾಡಳಿತದ ಬಗ್ಗೆ ಹಿಂದಿನಿಂದಲೂ ವ್ಯಾಪಕ ಟೀಕೆಗಳನ್ನು ಮಾಡುತ್ತಿದ್ದ ಅಖಿಲ ಭಾರತ ಅಣ್ಣಾ ಡಿಎಂಕೆ ಕೂಡ ಇಗ ಅದೇ ಹಾದಿ ತುಳಿದಿರುವುದು ಭಾರೀ ಟೀಕೆಗಳಿಗೆ ಕಾರಣವಾಗಿದೆ.

ಏಪ್ರಿಲ್ 18ರಂದು ತಮಿಳುನಾಡಿನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಐಡಿಎಂಕೆ ಸಂಚಾಲಕ ಮತ್ತು ಉಪ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು ತಮ್ಮ ಮಗನಿಗೆ ಮಣಿ ಹಾಕಿರುವುದು ಈಗ ಟೀಕೆಗಳಿಗೆ ಕಾರಣವಾಗಿದೆ.

ಸ್ಫರ್ಧಾ ಕಣದಲ್ಲಿರುವ ಡಿಎಂಕೆಯ 20 ಅಭ್ಯರ್ಥಿಗಳಲ್ಲಿ ಆರು ಮಂದಿ ಪ್ರಮುಖ ನಾಯಕರ ಮಕ್ಕಳೇ ಆಗಿದ್ದಾರೆ. ಇನ್ನು ಎಐಎಡಿಎಂಕೆ 20 ಸ್ಥಾನಗಳಲ್ಲಿ ನಾಲ್ವರು ಕ್ಷೇತ್ರಗಳಲ್ಲಿ ಪಕ್ಷದ ಹಿರಿಯ ಮುಖಂಡದ ನಾಲ್ವರು ಮಕ್ಕಳಿಗೆ ಅವಕಾಶ ನೀಡಿದೆ.

ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪುತ್ರ ರವೀಂದ್ರನಾಥ ಕುಮಾರ್ ಅವರಿಗೆ ಥೇನಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಲು ಟಿಕೆಟ್ ನೀಡಲಾಗಿದೆ.  ವಿರೋಧ ಪಕ್ಷವಾದ ಡಿಎಂಕೆ, ಅದರ ಪರಮೋಚ್ಚ ನಾಯಕ ಡಾ.ಎಂ.ಕರುಣಾನಿಧಿ ಅವರ ಕಾಲದಿಂದಲೂ ಕುಟುಂಬ ರಾಜಕಾರಣದಲ್ಲಿ ತೊಡಗಿದೆ. ಅವರ ಮಕ್ಕಳದಾದ ಎಂ.ಕೆ.ಸ್ಟಾಲಿನ್, ಕನಿಮೊಳಿ ಮತ್ತು ಅಳಗಿರಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin