ಮೊಜಾಂಬಿಕ್ ಚಂಡಮಾರುತದಲ್ಲಿ 200ಕ್ಕೂ ಹೆಚ್ಚು ಜನರ ರಕ್ಷಣೆ : ಭಾರತೀಯ ನೌಕಾಪಡೆ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.24-ವಿನಾಶಕಾರಿ ಚಂಡಮಾರುತದಿಂದ ತತ್ತರಿಸಿರುವ ಮೊಜಾಂಬಿಕ್‍ನಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, 1,382 ಸಂತ್ರಸ್ತರಿಗೆ ನೆರವು ನೀಡಿದೆ.

ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಮೇಲೆ ಮಾರ್ಚ್ 15ರಂದು ಅಪ್ಪಳಿಸಿ ಇಡಾಯಿ ಹೆಸರಿನ ಚಂಡಮಾರುತದಿಂದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮಲವಿ ದೇಶಗಳಲ್ಲಿ ಅನೇಕ ಮಂದಿ ಸಾವಿಗೀಡಾಗಿ ವ್ಯಾಪಕ ಹಾನಿ ಸಂಭವಿಸಿತು.

ಮೊಜಾಂಬಿಕ್ ಸರ್ಕಾರದ ಕೋರಿಕೆ ಭಾರತ ಸರ್ಕಾರ ನೌಕಾಪಡೆಯ ಹಡುಗುಗಳನ್ನು ಪ್ರಕೃತಿ ವಿಕೋಪ ಸಂತ್ರಸ್ತ ಪ್ರದೇಶಗಳಿಗೆ ರವಾನಿಸಿತು. ಅಲ್ಲಿ ಯುದ್ದೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡ ಭಾರತೀಯ ನೌಕೆಗಳು ಈವರೆಗೆ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, 1,381 ಜನರಿಗೆ ವೈದ್ಯಕೀಯ ಶಿಬಿರಗಳಲ್ಲಿ ನೆರವು ಒದಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತದ ಮೂರು ನೌಕೆಗಳು ಮೊಜಾಂಬಿಕ್‍ನ ಬಂದರು ನಗರಿ ಬೆರ್ರಾ ಕರಾವಳಿ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜರರನ್ನು ರಕ್ಷಿಸಿ, ಸಂತ್ರಸ್ತರಿಗೆ ನೀಡಿರುವ ನೆರವನ್ನು ಆಫ್ರಿಕಾ ರಾಷ್ಟ್ರ ಕೃತಜ್ಞತೆಯಿಂದ ಧನ್ಯವಾದ ಸಲ್ಲಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin