‘ಭಾಗ್ ರಾಹುಲ್ ಭಾಗ್’… ಸ್ಮೃತಿ ಇರಾನಿ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.25- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿಯನ್ನೇ ಟೀಕಾಸ್ತ್ರವನ್ನಾಗಿ ಬಳಸಿಕೊಂಡಿರುವ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ರಾಹುಲ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸ್ಮೃತಿ ಇರಾನಿ ತಮ್ಮ ಟ್ವೀಟ್‍ನಲ್ಲಿ ಭಾಗ್ ರಾಹುಲ್ ಭಾಗ್(ಓಡು ರಾಹುಲ್ ಓಡು) ಎಂದು ಛೇಡಿಸಿದ್ದಾರೆ. ರಾಹುಲ್‍ರನ್ನು ಅಮೇಥಿಯಿಂದ ಜನರು ಓಡಿಸಿದ್ದಾರೆ. ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದರಿಂದಲೇ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆಂದು ಪ್ರಹಸನ ಸೃಷ್ಟಿಯಾಗಿದೆ ಎಂದು ಕುಟುಕಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಮೇಥಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪರಭಾವ ಕೊಂಡಿದ್ದರು. ಈ ಬಾರಿಯೂ ಸ್ಮೃತಿ ಇರಾನಿ ಅಮೇಥಿಯಿಂದಲೇ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಆದರೆ ರಾಹುಲ್ ಗಾಂಧಿ ಮಾತ್ರ ಈ ಬಾರಿ ಕರ್ನಾಟಕ, ತಮಿಳುನಾಡಿನಿಂದ ಸ್ಪರ್ಧಿಸುವಂತೆ ಬೇಡಿಕೆ ಇದೆ. ರಾಹುಲ್ ಅಮೇಥಿಯಿಂದಲೇ ಸ್ಪರ್ಧಿಸುತ್ತಾರೆಂದು ಕಳೆದ ತಿಂಗಳು ಕಾಂಗ್ರೆಸ್ ಸಹ ಹೇಳಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )