ಚುನಾವಣೆಗೂ ಮೊದಲೆ ಸೋಲೊಪ್ಪಿಕೊಂಡಿದೆ ಮೈತ್ರಿ ಪಕ್ಷ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.25- ಚುನಾವಣೆಗೆ ಮೊದಲೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಪಕ್ಷಗಳು ಸೋಲೊಪ್ಪಿಕೊಂಡಂತಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟಾಂಗ್ ನೀಡಿದ್ದಾರೆ.

ಬಿ ಫಾರಂ ಪಡೆದು ರಾಧಾಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಆದರೆ ಈಗ ಅಭ್ಯರ್ಥಿಗಳೆ ಇಲ್ಲದಾಗಿದೆ. ಹಾಗಾಗಿ ಕಾಂಗ್ರೆಸ್‍ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.

ಆದರೆ ಕಾಂಗ್ರೆಸ್‍ನಲ್ಲೂ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಗಳೆ ಇಲ್ಲದಾಗಿದೆ ಎಂದು ಟೀಕಿಸಿದರು.ಚುನಾವಣೆ ಸೆಣಸಾಡಲು ಕನಿಷ್ಟ ಸಮರ್ಥ ಅಭ್ಯರ್ಥಿಗಳು ಇರಬೇಕು.ಈಗ ನಮ್ಮ ಕ್ಷೇತ್ರದಲ್ಲಿ ಅಂತಹ ಅಭ್ಯರ್ಥಿಗಳೆ ಇಲ್ಲದಂತಾಗಿದೆ ಎಂದರು.ಕುಟುಂಬ ಸಮೇತರಾಗಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಸದಾನಂದಗೌಡರು ಸಂಜಯ್ ನಗರದಲ್ಲಿ ರೋಡ್ ಷೋ ನಡೆಸಿದರು.

ಈ ವೇಳೆ ಸಂಜಯ್ ನಗರ ರಸ್ತೆ ವಾಹನದಟ್ಟನೆಯಿಂದ ಜನ ಪರದಾಡುವಂತಾಯಿತು. ರೋಡ್ ಷೋದಲ್ಲಿ ಕಟ್ಟಾಸುಬ್ರಹಣ್ಯ ನಾಯ್ಡು, ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಕೆ.ಪಿ.ನಂಜುಂಡಿ ಮತ್ತಿತರರು ಉಪಸ್ಥಿತರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )