ಭಾರತೀಯ ವಾಯುಪಡೆಗೆ ಚಿನೂಕ್ ಹೆಲಿಕಾಫ್ಟರ್ ಸೇರ್ಪಡೆ, ಇದರ ವಿಶೇಷತೆಯೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಚಂಡೀಗಢ, ಮಾ.25- ಯಾವುದೇ ಪ್ರತಿಕೂಲ ಸನ್ನಿವೇಶಗಳಲ್ಲೂ ಸೈನಿಕರನ್ನು ಮತ್ತು ಸೇನಾ ಸಾಮಾಗ್ರಿಗಳನ್ನು ನಿರ್ಧಿಷ್ಟ ಪ್ರದೇಶಕ್ಕೆ ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಚಿನೂಕ್‍ಹೆಲಿಕಾಫ್ಟರ್‍ಗಳು ಇದೀಗ ಭಾರತೀಯ ವಾಯುಸೇನೆಯ ಬತ್ತಳಿಕೆಗೆ ಸೇರ್ಪಡೆಯಾಗಿದೆ. ಇದರಿಂದಾಗಿ ಸಿಯಾಚಿನ್ ಸೇರಿದಂತೆ ದುರ್ಗಮ ಗಡಿಭಾಗಗಳಿಗೆ ಇನ್ನು ಸೈನಿಕರ ರವಾನೆ ಮತ್ತು ಸೇನಾ ಸಾಮಾಗ್ರಿಗಳ ಸಾಗಾಣಿಕೆ ಸುಲಭವಾಗಲಿದೆ.

ಅಧಿಕ ಭಾರದ ಸಾಮಾಗ್ರಿಗಳನ್ನು ಹೊತ್ತೂಯ್ಯಬಲ್ಲ ಸಾಮಥ್ರ್ಯವಿರುವ ಇಂತಹ ನಾಲ್ಕು ಚಿನೂಕ್‍ಹೆಲಿಕಾಫ್ಟರ್‍ಗಳನ್ನು ಇಂದು ವಾಯಪಡೆಗೆ ಸೇರ್ಪಡೆಗೊಳಿಸಲಾಯಿತು. ವಾಯು ಸೇನಾ ಮುಖ್ಯಸ್ಥ ಏರ್‍ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರು ಚಂಡೀಗಢದಲ್ಲಿ ಚಿನೂಕ್ ಹೆಲಿಕಾಫ್ಟರ್‍ಗಳನ್ನು ವಾಯುಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು.

2015ರಲ್ಲಿ ಭಾರತವು 15 ಚಿನೂಕ್ ಹೆಲಿಕಾಪ್ಟರ್‍ಗಳಿಗಾಗಿ ಅಮೆರಿಕಾದ ಜೊತೆ 1.5 ಬಿಲಿಯನ್‍ಡಾಲರ್‍ಮೊತ್ತದ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ ಒಪ್ಪಂದದ ಪ್ರಕಾರ ಮೊದಲ ಕಂತಿನ ನಾಲ್ಕು ಹೆಲಿಕಾಫ್ಟರ್‍ಗಳು ಅಮೆರಿಕಾದಿಂದ ಗುಜರಾತ್‍ನ ಮುಂದ್ರಾ ಬಂದರಿನ ಮೂಲಕ ಹಡಗಿನಲ್ಲಿ ಭಾರತಕ್ಕೆ ಆಗಮಿಸಿದ್ದವು, ಬಳಿಕ ಅಲ್ಲಿಂದ ಅವುಗಳನ್ನು ಚಂಡೀಗಢಕ್ಕೆ ರವಾನಿಸಲಾಗಿತ್ತು.

ಈ ಮೂಲಕ ಚಿನೂಕ್ ಹೆಲಿಕಾಫ್ಟರ್‍ಗಳನ್ನು ಬಳಸುತ್ತಿರುವ 19ನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಂತಾಗಿದೆ. ಒಂದು ಬಾರಿಗೆ 23,000 ಕಿಲೋ ಸಾಮಥ್ರ್ಯದ ಭಾರವನ್ನು ಹೊತ್ತೊಯ್ಯಬಲ್ಲ ಸಾಮಥ್ರ್ಯ ಈ ಹೆಲಿಕಾಫ್ಟರ್‍ಗಿದೆ. ಮತ್ತಿದರ ಗರಿಷ್ಠ ವೇಗ ಗಂಟೆಗೆ 302 ಕಿಲೋಮೀಟರ್‍ಗಳಾಗಿದೆ.

ಸೇನಾ ಸಾಮಾಗ್ರಿಗಳನ್ನು ರವಾನಿಸಲು ಮಾತ್ರವೇ ಅಲ್ಲಿದೆ ಚಿನೂಕ್ ಹೆಲಿಕಾಫ್ಟರ್‍ಗಳನ್ನು ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಹಾಗೂ ವಿಕೋಪ ಪರಿಹಾರ ಕಾರ್ಯಾಚರಣೆ ಸಂದರ್ಭದಲ್ಲೂ ಬಳಸಬಹುದಾಗಿರುತ್ತದೆ. ಹೀಗೆ ಬಹುಪಯೋಗಿ ಮಾದರಿಯ ಚಿನೂಕ್ ಹೆಲಿಕಾಪ್ಟರ್‍ಗಳ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆಗೆ ವಿಶೇಷ ಬಲ ಬಂದಂತಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )