ಇಂದಿನ ಪಂಚಾಗ ಮತ್ತು ರಾಶಿಫಲ (26-03-2019- ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶರದೃತುವಿನ ಮೋಡಗಳು ಗುಡುಗುತ್ತವೆ, ಮಳೆ ಸುರಿಸುವುದಿಲ್ಲ. ಮಳೆಗಾಲದಲ್ಲಿ ಶಬ್ದ ಮಾಡದೆ ಮಳೆ ಸುರಿಸುತ್ತವೆ. ಅದೇ ರೀತಿ ನೀಚನು ಮಾತನಾಡುತ್ತಾನೆ, ನಡೆದುಕೊಳ್ಳುವುದಿಲ್ಲ. ಸತ್ಪುರುಷನು ಮಾತನಾಡದೆ ಕಾರ್ಯ ಮಾಡುತ್ತಾನೆ.  -ಸುಭಾಷಿತರತ್ನಭಾಂಡಾಗಾರ

# ಪಂಚಾಂಗ :ಮಂಗಳವಾರ , 26.03.2019
ಸೂರ್ಯ ಉದಯ ಬೆ.06.20 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ರಾ.10.26 / ಚಂದ್ರ ಅಸ್ತ ಸಂ.10.34
ವಿಲಂಬಿ ಸಂವತ್ಸರ / ಉತ್ತರಾಯಣ/ ಶಿಶಿರ ಋತು /ಫಾಲ್ಗುಣ ಮಾಸ / ಶುಕ್ಲಪಕ್ಷ / ತಿಥಿ : ಷಷ್ಠೀ
(ರಾ.08.02) ನಕ್ಷತ್ರ: ಅನೂರಾಧ (ಬೆ.07.15) ಯೋಗ: ಸಿದ್ಧಿ (ಸಾ.05.03) ಕರಣ: ಗರಜೆ-ವಣಿಜ್ (ಬೆ.07.54-ರಾ.08.02) ಮಳೆ ನಕ್ಷತ್ರ: ಉತ್ತರಾಭಾದ್ರ
ಮಾಸ: ಮೀನ ತೇದಿ: 12

# ರಾಶಿ ಭವಿಷ್ಯ

ಮೇಷ: ದೂರದ ಬಂಧುಗಳ ಆಗಮನ
ವೃಷಭ: ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಲಿದೆ
ಮಿಥುನ: ಶತ್ರುಗಳು ದೂರವಾಗುತ್ತಾರೆ
ಕಟಕ: ವ್ಯವಹಾರದಲ್ಲಿ ಮೋಸವಾಗಬಹುದು
ಸಿಂಹ: ಹಲವು ದಿನಗಳ ಕನಸು ನನಸಾಗಲಿದೆ
ಕನ್ಯಾ: ಮಿತ್ರರ ಆಗಮನದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ
ತುಲಾ: ಬ್ಯಾಂಕ್ ಹಾಗೂ ಆರ್ಥಿಕ ವ್ಯವಹಾರದವರಿಗೆ ಉತ್ತಮವಾದ ದಿನ
ವೃಶ್ಚಿಕ: ವಾಹನಗಳನ್ನು ಖರೀದಿ ಸುವ ಬಗ್ಗೆ ಚಿಂತನೆ ನಡೆಸುವಿರಿ
ಧನುಸ್ಸು: ಮಾನಸಿಕ ಒತ್ತಡವನ್ನು ಧೈರ್ಯದಿಂದ ನಿಭಾಯಿಸಿ. ವ್ಯವಹಾರ ಮುಂದೂಡಿ
ಮಕರ: ಉದ್ಯೋಗದಲ್ಲಿ ಬೇರೆಯವರ ಸಲಹೆ ಪಡೆಯುವಾಗ ಜಾಗ್ರತೆ. ದಾಂಪತ್ಯದಲ್ಲಿ ಸಾಮರಸ್ಯ
ಕುಂಭ: ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಿ
ಮೀನ: ಬಂಧುಗಳಿಗೆ ಸಹಾಯ ಮಾಡಿ. ಮಕ್ಕಳ ಪ್ರಗತಿಯಿಂದ ಸಂತಸ. ಮನೆಯಲ್ಲಿ ನೆಮ್ಮದಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )