21ರಿಂದ ಅ.1ರವರೆಗೆ ದಸರಾ ಫಲಪುಷ್ಪ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.19-ಐತಿಹಾಸಿಕ ದಸರಾ ಮಹೋತ್ಸವದ ಆಕರ್ಷಣೆಗಳಲ್ಲೊಂದಾದ ದಸರಾ ಫಲಪುಪ್ಪ ಪ್ರದರ್ಶನ ಸೆ.21ರಿಂದ ಅ.1ರವರೆಗೂ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿ ಶಿವಶಂಕರ್ ತಿಳಿಸಿದರುಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ನಜರಾಬಾದ್, ನಿಶಾರ್‍ಬಾದ್‍ನಲ್ಲಿ ಆರಂಭವಾಗಲಿರುವ 12 ದಿನಗಳ ಫಲಪುಪ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹಾದೇವಪ್ಪ ಸಂಜೆ 4.30ಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಸಂವಿಧಾನ, ಸಮಾನತೆ ಹಾಗೂ ಭಾತೃತ್ವ ವಿಷಯಗಳನ್ನು ಈ ಬಾರಿ ಫಲಪುಪ್ಪ ಪ್ರದರ್ಶನದಲ್ಲಿ ಆಯೋಜಿಸಲಾಗಿದೆ. ಸೋಮನಾಥಪುರ ಚನ್ನಕೇಶವ ದೇವಾಲಯ, ದೊಡ್ಡಗಡಿಯಾರ, ಐಫೆಲ್‍ಟವರ್, ಭಾರತಿಗರ್ಲ್, ನವೀಲು, ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಮಾದರಿಯ ಪ್ರತಿಮೆಗಳನ್ನು ವಿವಿಧ ಹೂವುಗಳಿಂದ ನಿರ್ಮಿಸಲಾಗುವುದು ಎಂದರು. ಚನ್ನಕೇಶವ ದೇವಾಲಯವನ್ನು 4.5ಲಕ್ಷ ಹೂವುಗಳಿಂದ 37 ಅಡಿ ಅಗಲ, 16*17 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಕಳೆದ ವರ್ಷಕ್ಕಿಂತ ಈ ಬಾರಿ ಪ್ರವೇಶ ಶುಲ್ಕ 20ರೂ ಯಿಂದ 25ರೂಗೆ ಹೆಚ್ಚಿಸಲಾಗಿದೆ. ವಯಸ್ಕರಿಗೆ 20 ರೂ, ಮಕ್ಕಳಿಗೆ 10 ರೂ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಫಲಪುಪ್ಪ ಪ್ರದರ್ಶನಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಹಾಗಾಗಿ ಹೆಚ್ಚು ಆದಾಯ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin